alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಸರ್ಕಾರಿ ನೌಕರರಿಗೆ ಸದ್ಯದಲ್ಲೇ ಸಿಗಲಿದೆ ಸಿಹಿ ಸುದ್ದಿ

ಜಸ್ಟಿಸ್ ಎ.ಕೆ.ಮಾಥುರ್ ನೇತೃತ್ವದ 7ನೇ ವೇತನ ಆಯೋಗದ ಶಿಫಾರಸಿನಂತೆ ನೌಕರರ ತಿಂಗಳ ಕನಿಷ್ಟ ವೇತನವನ್ನು 7000 ರೂ.ನಿಂದ 18,000 ರೂಪಾಯಿಗೆ ಏರಿಕೆ ಮಾಡಲು ಕಳೆದ ವರ್ಷವೇ ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿತ್ತು.

ಜೂನ್ 2016 ಮತ್ತು ಜುಲೈ 2017ರಲ್ಲಿ ಈ ಶಿಫಾರಸ್ಸುಗಳಿಗೆ ಅಂಗೀಕಾರ ದೊರೆತಿದೆ. ಆಗಿನಿಂದ್ಲೂ ಕೇಂದ್ರ ಸರ್ಕಾರಿ ನೌಕರರು ಕನಿಷ್ಟ ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಕನಿಷ್ಟ ವೇತನವನ್ನು 18,000 ರೂ.ನಿಂದ 21,000 ರೂ.ಗೆ ಏರಿಕೆ ಮಾಡಲು ಚಿಂತನೆ ನಡೆಸಿದೆ.

ಇದರಿಂದ 48 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಪ್ರಯೋಜನವಾಗಲಿದೆ. ಆದ್ರೆ ನೌಕರರು ಮಾತ್ರ ವೇತನವನ್ನು 26,000 ರೂ.ಗೆ ಹೆಚ್ಚಳ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಶಿಕ್ಷಕರ ವೇತನವನ್ನೂ ಪರಿಷ್ಕರಣೆ ಮಾಡಲಾಗಿದೆ. ಇದರಿಂದ 106 ಯೂನಿವರ್ಸಿಟಿ ಮತ್ತು ಕಾಲೇಜಿನ 7.58 ಲಕ್ಷ ಶಿಕ್ಷಕರಿಗೆ ಪ್ರಯೋಜನವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...