alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ‘ಸನ್ನಿ ಕಾಂಡೊಮ್’ ಕುರಿತಾದ ಒಂದು ಸುದ್ದಿ

sunny-goaaa

ಪಣಜಿ: ಬಾಲಿವುಡ್ ಬೆಡಗಿ ಸನ್ನಿಲಿಯೊನ್ ಕಾಣಿಸಿಕೊಂಡಿರುವ, ಕಾಂಡೊಮ್ ಜಾಹೀರಾತಿಗೆ ಮಹಿಳಾ ಸಂಘಟನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಪ್ಲೇಸ್ ಹಾಗೂ ಕದಂಬ ಬಸ್ ಗಳ ಮೇಲೆ ಸನ್ನಿ ಲಿಯೋನ್ ಕಾಣಿಸಿಕೊಂಡಿರುವ, ಗರ್ಭ ನಿರೋಧಕ ಜಾಹೀರಾತು ಫಲಕ ಅಳವಡಿಸಲಾಗಿದೆ.

ಇವುಗಳಿಂದ ಹೆಣ್ಣುಮಕ್ಕಳಿಗೆ ಮುಜುಗರವಾಗುತ್ತಿದ್ದು, ಇದನ್ನು ತಪ್ಪಿಸಬೇಕೆಂದು ಒತ್ತಾಯಿಸಲಾಗಿದೆ. ರಣರಾಗಿಣಿ ಮಹಿಳಾ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಗೋವಾ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿಯ ಅಂಗ ಸಂಸ್ಥೆಯಾಗಿರುವ ರಣರಾಗಿಣಿ ಸಂಘಟನೆಯಿಂದ ಜಾಹೀರಾತಿನ ತೆರವಿಗೆ ಆಗ್ರಹಿಸಿದ್ದು, ಮಹಿಳೆಯರನ್ನು ಭೋಗದ ವಸ್ತುವಂತೆ ಬಿಂಬಿಸುತ್ತಿರುವ ಇಂತಹ ಜಾಹೀರಾತು ಸರಿ ಇಲ್ಲ. ಅನೇಕ ಮಹಿಳೆಯರು ಈ ಕುರಿತು ದೂರು ನೀಡಿದ್ದು, ಸಾರ್ವಜನಿಕ ಸ್ಥಳಗಳಿಂದ ಕೂಡಲೇ ತೆರವುಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...