alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದ್ದ ಪೊಲೀಸನ ವಿಡಿಯೋದ ಅಸಲಿ ಕಾರಣ ಬಯಲು

police

ಕಳೆದ ವರ್ಷದ ಆಗಸ್ಟ್ ನಲ್ಲಿ ದೆಹಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸನೊಬ್ಬ ಕಂಠ ಪೂರ್ತಿ ಮದ್ಯ ಸೇವಿಸಿದ್ದರೆಂದು ಆರೋಪಿಸಲಾಗಿತ್ತಲ್ಲದೇ ಆತ ಮತ್ತಿನಲ್ಲಿ ತೂರಾಡುತ್ತಿದ್ದ ವಿಡಿಯೋವೊಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪಲೋಡ್ ಮಾಡಲಾಗಿತ್ತು. ಆದರೆ ಅವರ ಅಂದಿನ ವರ್ತನೆಗೆ ಅಸಲಿ ಕಾರಣ ಬಹಿರಂಗವಾಗಿದೆ.

ಸಾಮಾಜಿಕ ಜಾಲ ತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವಿಚಾರಣೆ ನಡೆಸದೆ ಹಿರಿಯ ಪೊಲೀಸ್ ಅಧಿಕಾರಿಗಳು, ಸಮವಸ್ತ್ರದಲ್ಲಿದ್ದಾಗಲೇ ಮದ್ಯಪಾನ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆಂಬ ಆರೋಪದ ಮೇಲೆ 50 ವರ್ಷದ ಸಲೀಂ ಖಾನ್ ಅವರನ್ನು ಅಮಾನತು ಮಾಡಿ ಆದೇಶಿಸಿದ್ದರು.

ಇದೀಗ ಹೊರ ಬಿದ್ದ ಸತ್ಯವೇನೆಂದರೆ ಸಲೀಂ ಖಾನ್ ಅಸಲಿಗೆ ಅಂದು ಮದ್ಯಪಾನವೇ ಮಾಡಿರಲಿಲ್ಲ. ಮೆಟ್ರೋ ರೈಲಿನ ಪ್ರಯಾಣದ ವೇಳೆ ಆನಾರೋಗ್ಯಕ್ಕೊಳಗಾದ ಅವರು ಕುಸಿದು ಬಿದ್ದಿದ್ದರಲ್ಲದೇ ಪಾರ್ಶ್ವವಾಯುಗೆ ತುತ್ತಾಗಿದ್ದರೆಂದು ಹೇಳಲಾಗಿದೆ. ಆದರೆ ಅವರ ಸ್ಥಿತಿಯನ್ನು ತಪ್ಪಾಗಿ ಅಂದಾಜಿಸಿದ ಸಹ ಪ್ರಯಾಣಿಕರು ನೆರವಿಗೆ ಧಾವಿಸುವ ಬದಲು ತೂರಾಡುತ್ತಿದ್ದ ಅವರ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದರು.

ಸತ್ಯಾಂಶ ಬೆಳಕಿಗೆ ಬಂದ ನಂತರ ಸಲೀಂ ಖಾನ್ ಅವರನ್ನು ಕಳೆದ ನವೆಂಬರ್ ನಲ್ಲಿಯೇ ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಲಾಗಿದೆ. ವಿಡಿಯೋವನ್ನು ವೈಭವೀಕರಿಸಿ ಸುದ್ದಿ ಮಾಡಿದ್ದ ಮಾಧ್ಯಮಗಳು ಬಳಿಕ ನಡೆದ ವಿಚಾರಗಳನ್ನು ಬರೆಯಲೇ ಎಂಬುದು ಸಲೀಂ ಖಾನ್ ಅವರ ಅಳಲಾಗಿದೆ. ವಿಡಿಯೋದಿಂದಾಗಿ ತಮ್ಮ ಹಾಗೂ ಕುಟುಂಬಕ್ಕೆ ಆದ ಮಾನ ಹಾನಿಯನ್ನು ತುಂಬಿ ಕೊಡುವರ್ಯಾರು ಎಂದು ಪ್ರಶ್ನಿಸುವ ಅವರು ನ್ಯಾಯ ಕೋರಿ ಕೋರ್ಟ್ ಮೆಟ್ಟಿಲೇರುವ ಚಿಂತನೆಯಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...