alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ವೈರಲ್ ವಿಡಿಯೋ ಹಿಂದಿನ ಅಸಲಿ ‘ಸತ್ಯ’

ಕೆಲ ದಿನಗಳ ಹಿಂದೆ ಹಲವರ ಎಚ್ಚರಿಕೆಯ ನಡುವೆಯೂ ವೇಗವಾಗಿ ಚಲಿಸುತ್ತಿರುವ ರೈಲಿನ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಯುವಕನೊಬ್ಬ ರೈಲು ತಗುಲಿ ತೀವ್ರವಾಗಿ ಗಾಯಗೊಂಡ ಸುದ್ದಿಯನ್ನು ಓದಿದ್ದೀರಲ್ಲದೆ ವಿಡಿಯೋವನ್ನೂ ನೋಡಿದ್ದೀರಿ.

ಸೆಲ್ಫಿ ತೆಗೆದುಕೊಳ್ಳಲು ಹೋದ ಶಿವ ಎಂಬ ಯುವಕ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆಂಬ ವಿಷಯ ರಾಷ್ಟ್ರೀಯ ದೃಶ್ಯ ಮಾಧ್ಯಮಗಳೂ ಸೇರಿದಂತೆ ಬಹುತೇಕ ಎಲ್ಲ ಮಾಧ್ಯಮಗಳಲ್ಲೂ ವರದಿಯಾಗಿತ್ತು.

ಆದರೆ ವಿಡಿಯೋ ಹಿಂದಿನ ಅಸಲಿಯತ್ತೇ ಬೇರೆಯಿದೆ ಎಂಬುದು ಈಗ ಬಹಿರಂಗವಾಗಿದೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾನೆಂದು ಹೇಳಲಾದ ಶಿವ, ತನ್ನ ಸ್ನೇಹಿತರ ಜೊತೆಗೂಡಿ ಈ ಫೇಕ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದನೆಂಬ ಸಂಗತಿ ಈಗ ಬಟಾಬಯಲಾಗಿದೆ.

ಅಸಲಿಗೆ ಶಿವನಿಗೆ ಒಂದಿಂಚೂ ಗಾಯವಾಗಿಲ್ಲ. ಪ್ರಚಾರಕ್ಕಾಗಿ ಆತ, ಮತ್ತಾತನ ಸ್ನೇಹಿತರು ಮಾಡಿದ ಕೃತ್ಯವೆಂಬುದು ಬಹಿರಂಗವಾಗಿದ್ದು, ಅಸಲಿಯತ್ತು ಹೊರ ಬೀಳುತ್ತಲೇ ಶಿವ ಭೂಗತನಾಗಿದ್ದಾನೆ.

ಅಪಘಾತದ ದೃಶ್ಯ ಸೃಷ್ಟಿಸಿದ ನಂತರ ಶಿವ ತನ್ನ ಸ್ನೇಹಿತರ ಜೊತೆ ತಮಾಷೆ ಮಾಡುತ್ತಿರುವ ಮತ್ತೊಂದು ವಿಡಿಯೋ ಈಗ ದೃಶ್ಯ ಮಾಧ್ಯಮವೊಂದರಲ್ಲಿ ಪ್ರಸಾರಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...