alex Certify
ಕನ್ನಡ ದುನಿಯಾ       Mobile App
       

Kannada Duniya

ನೆನಪಿದೆಯಾ ಶೂ ವೈದ್ಯರ ಪ್ರಕರಣ, ಆತನ ಕೌಶಲ್ಯಕ್ಕೆ ಸಿಕ್ಕಿದೆ ಗಿಫ್ಟ್

ಮುಂಬೈ ಮೂಲದ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಟ್ವಿಟರ್ ನಲ್ಲಿ ತಿಂಗಳ ಹಿಂದೆ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದರು.

ಚಪ್ಪಲಿ ಹೊಲಿಯುವ ವ್ಯಕ್ತಿಯೊಬ್ಬರ ಭಾವಚಿತ್ರ ಅದಾಗಿದ್ದು, ಅದರಲ್ಲಿ ಚಪ್ಪಲಿ ವೈದ್ಯರೆಂದು ಬಿಂಬಿಸಲಾಗಿತ್ತು. ರಸ್ತೆ ಬದಿಯಲ್ಲಿ ಅವರು ಫಲಕವೊಂದನ್ನು ಹಾಕಿಕೊಂಡು ಚಪ್ಪಲಿ, ಶೂಗಳೊಂದಿಗೆ ಕಾಣಿಸಿಕೊಂಡಿದ್ದರು.

ಈ ಚಿತ್ರವನ್ನು ಪೋಸ್ಟ್ ಮಾಡಿದ್ದ ಆನಂದ್ ಮಹೀಂದ್ರಾ, ಇವರನ್ನು ಯಾರಾದರೂ ಬಲ್ಲಿರಾ. ಇವರ ಮಾರ್ಕೇಟಿಂಗ್ ಕೌಶಲ್ಯ, ಸೃಜನಶೀಲತೆ ಗಮನಸೆಳೆಯುವಂತಿದೆ. ಅವರು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಪಾಠ ಮಾಡಬೇಕಿದೆ. ನಾನು ಅವರಿಗೆ ನೆರವಾಗಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದರು.

ಹರಿಯಾಣದಲ್ಲಿ ಆ ವ್ಯಕ್ತಿಯನ್ನು ಗುರುತಿಸಲಾಗಿದ್ದು, ಅವರಿಗೆ ನೆರವು ನೀಡಲು ಮುಂದಾದಾಗ ಪಡೆಯಲು ನಿರಾಕರಿಸಿದ್ದಾರೆ. ಹಣದ ಬದಲು ಒಳ್ಳೆಯ ಕಾರ್ಯಸ್ಥಳ ಬೇಕೆಂದು ಅವರು ಬಯಸಿದ್ದು, ಅವರ ಆಶಯದಂತೆ ಮೊಬೈಲ್ ಕಿಯೋಸ್ಕ್ ಕೊಡಿಸಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...