alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾರಿ ಚಾಲಕನ ಖಾತೆಗೆ ಜಮೆಯಾಗಿದ್ದು 999 ಕೋಟಿ

cabbie

ಮನುಷ್ಯ ಅಂದ್ಮೇಲೆ ತಪ್ಪು ಮಾಡೋದು ಸಹಜ, ಆದ್ರೆ ಅದನ್ನು ತಿದ್ದಿಕೊಳ್ಳೋದು ಬಿಟ್ಟು ದೊಡ್ಡ ಪ್ರಮಾದವನ್ನೇ ಮಾಡಿದ್ರೆ ಅದ್ರಿಂದ ಎಲ್ಲರಿಗೂ ತೊಂದರೆ ಕಟ್ಟಿಟ್ಟ ಬುತ್ತಿ.  ಪಂಜಾಬ್ ನ ಕ್ಯಾಬ್ ಚಾಲಕ ಬಲ್ವಿಂದರ್ ಸಿಂಗ್ ಖಾತೆಯಲ್ಲಿ ಇದ್ದಕ್ಕಿದ್ದಂತೆ 9 ಸಾವಿರ ಕೋಟಿ ರೂಪಾಯಿ ಜಮಾ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗಲೂ ಅವರ ಅಕೌಂಟ್ ಬ್ಯಾಲೆನ್ಸ್ ಎಷ್ಟು ಗೊತ್ತಾ 999 ಕೋಟಿ ರೂಪಾಯಿ.

ನೋಟು ನಿಷೇಧದಿಂದ ಎಲ್ರೂ ಹಣವಿಲ್ಲದೆ ಪರದಾಡುತ್ತಿರುವಾಗ ಬಲ್ವಿಂದರ್ ಸಿಂಗ್ ಬಲು ಅದೃಷ್ಟವಂತ ಎನಿಸಿಕೊಂಡಿದ್ರು. ಇದ್ದಕ್ಕಿದ್ದಂತೆ ನವೆಂಬರ್ 4 ರಂದು ಟ್ಯಾಕ್ಸಿ ಚಾಲಕ ಬಲ್ವಿಂದರ್ ಅವರ ‘ಜನಧನ್’ ಖಾತೆಗೆ 9806 ಕೋಟಿ ರೂಪಾಯಿ ಜಮಾ ಆಗಿತ್ತು. ಬಲ್ವಿಂದರ್ ಸಿಂಗ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲದಲ್ಲಿ ‘ಜನಧನ್’ ಖಾತೆ ಹೊಂದಿದ್ದಾರೆ. ಭಾರೀ ಮೊತ್ತದ ಹಣ ತನ್ನ ಖಾತೆಯಲ್ಲಿ ಜಮೆಯಾಗಿರುವುದನ್ನು ಕಂಡ ಬಲ್ವಿಂದರ್ ಸಿಂಗ್ ಬ್ಯಾಂಕ್ ಗೆ ತೆರಳಿ ವಿಚಾರಿಸಿದ್ದಾರೆ. ಈ ಕುರಿತು ಸಮರ್ಪಕ ಉತ್ತರ ನೀಡದ ಬ್ಯಾಂಕ್ ಸಿಬ್ಬಂದಿ ಆತನ ಪಾಸ್ ಪುಸ್ತಕ ವಾಪಾಸ್ ಪಡೆದು ಹೊಸ ಪಾಸ್ ಪುಸ್ತಕ ವಿತರಿಸಿದ್ದಾರೆ.

ಬ್ಯಾಂಕ್ ನಿಂದಾದ ಪ್ರಮಾದಕ್ಕೆ ರಾತ್ರಿ ಬೆಳಗಾಗುವುದರೊಳಗೆ ಸಾವಿರಾರು ಕೋಟಿ ರೂ. ಒಡೆಯನಾಗಿದ್ದ ಬಲ್ವಿಂದರ್ ಸಿಂಗ್ ಖಾತೆಯಲ್ಲಿದ್ದ ಹಣವನ್ನು ಬ್ಯಾಂಕ್ ಹಿಂಪಡೆದುಕೊಂಡಿದೆ. ಕೇವಲ 2,896 ರೂ. ಗಳನ್ನು ತನ್ನ ಖಾತೆಯಲ್ಲಿ ಹೊಂದಿದ್ದ ಬಲ್ವಿಂದರ್ ಸಿಂಗ್ ಖಾತೆಗೆ ಸಾವಿರಾರು ಕೋಟಿ ರೂ. ಜಮೆಯಾಗಲು ಬ್ಯಾಂಕ್ ಸಿಬ್ಬಂದಿ ಮಾಡಿದ ಯಡವಟ್ಟೇ ಕಾರಣವಾಗಿತ್ತು.

ನವೆಂಬರ್ 19 ರಂದು ಮತ್ತೆ ಅಂಥದ್ದೇ ಪ್ರಮಾದ ನಡೆದಿದೆ. ಖಾತೆಯ ಬ್ಯಾಲೆನ್ಸ್ 999 ಕೋಟಿ ಅಂತಾ ಬಲ್ವಿಂದರ್ ಅವರಿಗೆ ಮೆಸೇಜ್ ಬಂದಿದೆ. ಖಾತೆಗೆ ಜಮಾ ಆಗಿದ್ದು 147 ರೂಪಾಯಿ, ಆದ್ರೆ ಬ್ಯಾಲೆನ್ಸ್ ಮಾತ್ರ 999 ಕೋಟಿ ರೂಪಾಯಿ. ಮತ್ತೆ ಬ್ಯಾಂಕ್ ಗೆ ದೌಡಾಯಿಸಿದ ಬಲ್ವಿಂದರ್ ಸಿಂಗ್, ಸಿಬ್ಬಂದಿ ಮಾಡಿದ್ದ ಈ ತಪ್ಪನ್ನೂ ಸರಿಪಡಿಸಿದ್ದಾರೆ. ಈಗ ಬ್ಯಾಂಕ್ ಸಿಬ್ಬಂದಿ ಅವರ ಖಾತೆಯನ್ನೇ ಕ್ಲೋಸ್ ಮಾಡಿ ಆಗಿರೋ ತಪ್ಪುಗಳನ್ನೆಲ್ಲ ಮುಚ್ಚಿಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...