alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ಅತಿಥಿ ಗೃಹದಲ್ಲಿ ಕಂಪ್ಯೂಟರ್ ಬಾಬಾನಿಂದ ಪೂಜೆ

ಇತ್ತೀಚೆಗಷ್ಟೇ ಮಧ್ಯ ಪ್ರದೇಶ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರ ಸ್ಥಾನಮಾನ ಗಿಟ್ಟಿಸಿಕೊಂಡಿರುವ ಕಂಪ್ಯೂಟರ್ ಬಾಬಾ, ಬುಧವಾರದಂದು ಸರ್ಕಾರಿ ಅತಿಥಿ ಗೃಹದ ತಾರಸಿ ಮೇಲೆ ಪೂಜೆ ನೆರವೇರಿಸಿದ್ದಾರೆ.

ಕೈಯ್ಯಲ್ಲಿ ಸ್ಮಾರ್ಟ್ ಫೋನ್ ಹಿಡಿದಿರುವ ಕಂಪ್ಯೂಟರ್ ಬಾಬಾ ತಲೆ ಮೇಲೆ ಕಳಶವಿದ್ದು, ಇದರಿಂದ ಹೊರ ಬರುತ್ತಿರುವ ಹೊಗೆ ಸುತ್ತಲೂ ಆವರಿಸಿದೆ. ಈ ಚಿತ್ರವನ್ನು ಸೆರೆ ಹಿಡಿದವರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

ಮಧ್ಯ ಪ್ರದೇಶ ಸರ್ಕಾರದ ವಿರುದ್ದ ಸೆಡ್ಡು ಹೊಡೆದಿದ್ದ ಕಂಪ್ಯೂಟರ್ ಬಾಬಾ, ನರ್ಮದಾ ನದಿ ಸಂರಕ್ಷಿಸಲು ಸರ್ಕಾರ ವಿಫಲವಾಗಿದ್ದು, ಇದರ ವಿರುದ್ದ ರಥ ಯಾತ್ರೆ ಹಮ್ಮಿಕೊಳ್ಳುವುದಾಗಿ ಹೇಳಿದ್ದರು. ಇದಾದ ಬಳಿಕ ಸರ್ಕಾರ, ಕಂಪ್ಯೂಟರ್ ಬಾಬಾ ಸೇರಿದಂತೆ ಐವರು ಸಂತರಿಗೆ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರ ಸ್ಥಾನಮಾನ ನೀಡಿದ್ದು, ರಥಯಾತ್ರೆಯನ್ನು ರದ್ದು ಮಾಡಲಾಗಿತ್ತು. ಸರ್ಕಾರದ ಅವ್ಯವಹಾರ ಬಯಲಾಗುವುದೆಂಬ ಕಾರಣಕ್ಕೆ ಸಂತರಿಗೆ ಕ್ಯಾಬಿನೆಟ್ ಸಚಿವರ ಸ್ಥಾನಮಾನ ನೀಡಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...