alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಗ್ರಾಹಕರಿಗೆ ಸಿಹಿ-ಕಹಿ ಸುದ್ದಿ….

download (3)ಈಗ ಎಲ್ಲಾ ಕಡೆ ರಿಲಯೆನ್ಸ್ ಜಿಯೋ ಮೇನಿಯಾ. ಡಿಸೆಂಬರ್ 31ರವರೆಗೂ ಗ್ರಾಹಕರು ಜಿಯೋ 4ಜಿ ವೆಲ್ಕಮ್ ಆಫರ್ ನ ಪ್ರಯೋಜನ ಪಡೆದುಕೊಳ್ಳಬಹುದು. ಅನ್ ಲಿಮಿಟೆಡ್ ಡೇಟಾ, ಉಚಿತ ಕರೆ, ಎಸ್ ಎಂ ಎಸ್ ಸೌಲಭ್ಯ ಎಲ್ಲವೂ ಇದೆ.

ಆದ್ರೆ ಇದರಲ್ಲೂ ಗ್ರಾಹಕರಿಗೆ ಕಹಿ ಸುದ್ದಿಯೊಂದಿದೆ. ನಿಮ್ಮ 4ಜಿಬಿ ಡೇಟಾ ಪ್ಯಾಕ್ ಮುಗಿದ ನಂತರ ನಿಮ್ಮ ಇಂಟರ್ನೆಟ್ ವೇಗವನ್ನು 128 ಕೆಬಿಪಿಎಸ್ ಗೆ ಇಳಿಸಲಾಗುತ್ತದೆ. ಇದು ಗ್ರಾಹಕರಿಗೆ ನಿಜಕ್ಕೂ ಕಹಿ ಸುದ್ದಿ. ಒಳ್ಳೆಯ ಸುದ್ದಿ ಏನಂದ್ರೆ 4ಜಿಬಿ ಬಳಕೆ ದೈನಂದಿನ ಮಿತಿ ಹೊಂದಿದೆ. ಹಾಗಾಗಿ ಒಳ್ಳೆ ಸ್ಪೀಡ್ ನಲ್ಲಿ ನೀವು ಇಡೀ ತಿಂಗಳಿಗೆ 120 ಜಿಬಿ ಡೇಟಾ ಬಳಸಬಹುದು. ಬೇರೆ ಎಲ್ಲಾ ಟೆಲಿಕಾಂ ಕಂಪನಿಗಳ ಡೇಟಾ ದರ 1 ಜಿಬಿಗೆ ಕನಿಷ್ಠ 250 ರೂಪಾಯಿ ಇದೆ. ಆದ್ರೆ ಜಿಯೋ 1 ಜಿಬಿ ಡೇಟಾ ಬೆಲೆ ಕೇವಲ 50 ರೂಪಾಯಿ.

ದಿನಕ್ಕೆ 19 ರೂಪಾಯಿ ಪ್ಲಾನ್ ನಿಂದ ಆರಂಭವಾಗಿ 4999 ರೂಪಾಯಿವರೆಗಿನ 10 ಟಾರಿಫ್ ಪ್ಲಾನ್ ಗಳು ಜಿಯೋನಲ್ಲಿವೆ. 19 ರೂಪಾಯಿ ಪ್ಲಾನ್ ಹಾಕಿಸಿಕೊಂಡ್ರೂ ನಿಮಗೆ ದಿನಕ್ಕೆ 100 ಎಂಬಿ ಡೇಟಾ, 100 ಫ್ರೀ ಎಸ್ ಎಂಎಸ್ , ಅನ್ ಲಿಮಿಟೆಡ್ ಕರೆಗಳ ಸೌಲಭ್ಯ ಸಿಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...