alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರ ನಿರೀಕ್ಷೆ ಹೆಚ್ಚಿಸಿದೆ ರಿಲಯನ್ಸ್ ಜಿಯೋ ಕೊಡುಗೆ

reliance-jio-146ರಿಲಯನ್ಸ್ ಜಿಯೋ 4G LTE ಸೇವೆ ಇದೇ ಆಗಸ್ಟ್ ನಿಂದ ಆರಂಭವಾಗಲಿದ್ದು, ಭಾರೀ ಆಫರ್ ಗಳನ್ನು ನೀಡಲು ಮುಂದಾಗುವ ಮೂಲಕ ಪ್ರತಿಸ್ಪರ್ಧಿ ಕಂಪನಿಗಳಿಗೆ ಸವಾಲೊಡ್ಡಿರುವ ಜೊತೆಗೆ ಗ್ರಾಹಕರ ನಿರೀಕ್ಷೆಯನ್ನು ಹೆಚ್ಚಿಸಿದೆ.

ಅದರಲ್ಲೂ ಯುವ ಜನಾಂಗ ಮೊಬೈಲ್ ಇಂಟರ್ ನೆಟ್ ನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಅವರನ್ನು ಆಕರ್ಷಿಸಲು ಇತರೆ ಕಂಪನಿಗಳ ಡೇಟಾ ಪ್ಯಾಕ್ ದರಕ್ಕಿಂತ ರಿಲಯನ್ಸ್ ಜಿಯೋ 8 ಪಟ್ಟು ದರ ಕಡಿಮೆ ಮಾಡಲಿದೆ ಎನ್ನಲಾಗಿದೆ.

ಹೀಗಾಗಿ ಏರ್ ಟೆಲ್, ಐಡಿಯಾ, ವೊಡಾಫೋನ್ ತಮ್ಮ ಡೇಟಾ ಪ್ಯಾಕ್ ದರವನ್ನು ಈಗಾಗಲೇ ಕಡಿಮೆ ಮಾಡಿದ್ದು, ಕರೆ ದರಗಳಲ್ಲೂ ಕಡಿತಗೊಳಿಸುವ ಸಾಧ್ಯತೆ ಇದೆ. ರಿಲಯನ್ಸ್ ಜಿಯೋ ಮೊಬೈಲ್ ನಂಬರ್ ಪೋರ್ಟಬಲಿಟಿ ಸೌಲಭ್ಯವನ್ನೂ ನೀಡುತ್ತಿದ್ದು, ಹೀಗಾಗಿ ಗ್ರಾಹಕರು ಅತ್ತ ಆಕರ್ಷಿತರಾಗದಂತೆ ತಡೆಗಟ್ಟಲು ಇತರೆ ಕಂಪನಿಗಳು ಭಾರೀ ಕೊಡುಗೆ ಘೋಷಿಸುವ ಮೂಲಕ ಇದಕ್ಕೆ ತಡೆಯೊಡ್ಡಲು ತಯಾರಿ ನಡೆಸಿವೆ. ರಿಲಯನ್ಸ್ ಜಿಯೋ ಗ್ರಾಹಕರ ನಿರೀಕ್ಷೆಯನ್ನು ಎಷ್ಟರಮಟ್ಟಿಗೆ ಪೂರೈಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...