alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ದಾಖಲೆ ಬರೆದ ರಿಲಾಯನ್ಸ್ ಜಿಯೋ

ಅಗ್ಗದ ಹಾಗೂ ಲಾಭಕರ ಯೋಜನೆಗಳ ಮೂಲಕ ದಾಖಲೆ ಮೇಲೆ ದಾಖಲೆ ಬರೆದ ರಿಲಾಯನ್ಸ್ ಜಿಯೋ ಹೊಸ ದಾಖಲೆ ಬರೆದಿದೆ. ಕಂಪನಿ ಮತ್ತೆ ದೊಡ್ಡ ಮಟ್ಟದಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿದೆ. ರಿಲಾಯನ್ಸ್ ಜಿಯೋ ಜೂನ್ ತಿಂಗಳಿನಲ್ಲಿ 9.71 ಮಿಲಿಯನ್ (ಸುಮಾರು 91 ಲಕ್ಷ) ಗ್ರಾಹಕರನ್ನು ಸೇರಿದೆ. ಇದ್ರಿಂದ ಜಿಯೋ ಬಳಕೆದಾರರ ಸಂಖ್ಯೆ 21.5 ಕೋಟಿಗೇರಿದೆ.

ಜೂನ್ ತಿಂಗಳಿನಲ್ಲಿ ಟೆಲಿಕಾಂ ಕ್ಷೇತ್ರದ ದೊಡ್ಡ ಕಂಪನಿ ಏರ್ಟೆಲ್ 10,689 ಗ್ರಾಹಕರನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿದೆ. ಐಡಿಯಾ ಕಂಪನಿಯ ಈ ತಿಂಗಳ ಗ್ರಾಹಕರ ಸಂಖ್ಯೆ 63.6 ಲಕ್ಷ. ಈ ಎಲ್ಲ ಅಂಕೆ-ಸಂಖ್ಯೆಗಳನ್ನು ಟ್ರಾಯ್ ಬಿಡುಗಡೆ ಮಾಡಿದೆ.

ಶೀಘ್ರವೇ ವೋಡಾಫೋನ್ ಹಾಗೂ ಏರ್ಟೆಲ್ ಒಂದಾಗಲಿದ್ದು, ದೇಶದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿ ಇದು ಹೊರಹೊಮ್ಮಲಿದೆ. ಹಿಂದಿನ ತಿಂಗಳಿಗೆ ಹೋಲಿಸಿದ್ರೆ ಜೂನ್ ತಿಂಗಳಿನಲ್ಲಿ ವೋಡಾಫೋನ್ ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...