alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲಯನ್ಸ್ ಜಿಯೋ ಗಿಗಾ ಫೈಬರ್ ನೋಂದಣಿ ಹೇಗೆ ಗೊತ್ತಾ?

ರಿಲಯನ್ಸ್ ಇಂಡಸ್ಟ್ರಿ ತನ್ನ 41ನೇ ವಾರ್ಷಿಕ ಸಭೆಯಲ್ಲಿ ಜಿಯೋ ಗಿಗಾ ಫೈಬರ್ ಬಗ್ಗೆ ಅಧಿಕೃತ ಘೋಷಣೆ ಮಾಡಿತ್ತು. ಕಳೆದ ತಿಂಗಳಿಂದ ಇದ್ರ ನೋಂದಣಿ ಕಾರ್ಯ ಶುರುವಾಗಿದೆ. ಆರಂಭದಲ್ಲಿ ಆಕರ್ಷಕ ಕೊಡುಗೆಗಳನ್ನು ಘೋಷಣೆ ಮಾಡಿರುವ ಜಿಯೋ ಗಿಗಾ ಫೈಬರ್ ನೋಂದಣಿ ಸುಲಭ.

ಗಿಗಾ ಫೈಬರ್ ನೋಂದಣಿಗಾಗಿ ಮೊದಲು ರಿಲಯನ್ಸ್ ಜಿಯೋ ವೆಬ್ಸೈಟ್ ಗೆ ಭೇಟಿ ನೀಡಿ. ವೆಬ್ಸೈಟ್ ನ ಮೇಲ್ಭಾಗದಲ್ಲಿಯೇ ಜಿಯೊ ಗಿಗಾ ಫೈಬರ್ ಬ್ಯಾನರ್ ಕಾಣಿಸುತ್ತದೆ. ಈ ಬ್ಯಾನರ್ ಮೇಲೆ ಕೆಂಪು ಬಣ್ಣದ ಒಂದು ಬಟನ್ ಇದೆ. ಅದ್ರ ಮೇಲೆ invite Jio GigaFiber now ಎಂದು ಬರೆದಿದೆ. ಅದ್ರ ಮೇಲೆ ಕ್ಲಿಕ್ ಮಾಡ್ತಿದ್ದಂತೆ ಹೊಸ ಪೇಜ್ ಓಪನ್ ಆಗಲಿದೆ. ಅಲ್ಲಿ ಲೊಕೇಶನ್ ಹಾಕಬೇಕು.

ನಿಮ್ಮ ವಿಳಾಸ ಬರೆಯುತ್ತಿದ್ದಂತೆ ಅಲ್ಲಿಗೆ ಜಿಯೊ ಗಿಗಾ ಫೈಬರ್ ಲಭ್ಯವಿದೆಯೇ ಎಂಬ ಮಾಹಿತಿ ಸಿಗಲಿದೆ. ನಂತ್ರ ಪ್ರೋಸೀಡ್ ಬಟನ್ ಕ್ಲಿಕ್ ಮಾಡಬೇಕು. ಒಟಿಪಿ ಜನರೇಟ್ ಮಾಡಲು ಹೆಸ್ರು, ಮೊಬೈಲ್ ನಂಬರ್ ದಾಖಲಿಸಬೇಕು. ನಿಮ್ಮ ನಂಬರ್ ವೆರಿಫೈ ಆಗ್ತಿದ್ದಂತೆ ನಿಮ್ಮ ಹೆಸ್ರು ನೋಂದಣಿಯಾಗಿದೆ ಎಂದರ್ಥ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...