alex Certify
ಕನ್ನಡ ದುನಿಯಾ       Mobile App
       

Kannada Duniya

ಡೇಟಾ ಪ್ಯಾಕ್ ದರ ಇಳಿಕೆ: ಈಗ ವೋಡಾ ಫೋನ್ ಸರದಿ

Vodafone_Simರಿಲಾಯನ್ಸ್ ನ ಜಿಯೋ, ಆಕರ್ಷಕ ಕೊಡುಗೆಗಳ ಮೂಲಕ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಂತೆಯೇ ಕಂಗಾಲಾದ ಇತರೆ ಟೆಲಿಕಾಂ ಕಂಪನಿಗಳು ಜಿಯೋ ಗೆ ಸರಿಸಮಾನವಾಗಿ ದರ ನಿಗದಿ ಮಾಡುವ ಮೂಲಕ ಪೈಪೋಟಿ ನೀಡಲು ಸಿದ್ದತೆ ನಡೆಸಿದ್ದು, ಇದರ ಲಾಭ ಮೊಬೈಲ್ ಗ್ರಾಹಕರಿಗಾಗುತ್ತಿದೆ.

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮುಂದಿನ ದಿನಗಳಲ್ಲಿ ಜಿಯೋ ಗಿಂತ ಕಡಿಮೆ ದರದಲ್ಲಿ ಡೇಟಾ ಸೇವೆ ನೀಡುವುದಾಗಿ ಘೋಷಿಸಿದ್ದಲ್ಲದೇ ಹಲವು ಪ್ಲಾನ್ ಗಳನ್ನು ಈಗಾಗಲೇ ಜಾರಿಗೊಳಿಸಿದೆ. ಏರ್ಟೆಲ್ ಕೂಡಾ ತನ್ನ ಡೇಟಾ ಪ್ಯಾಕ್ ದರಗಳಲ್ಲಿ ಬದಲಾವಣೆ ಮಾಡಿದ್ದು, ಕಳೆದ ವಾರವಷ್ಟೇ ಪ್ರಿ ಪೇಯ್ಡ್ ಗ್ರಾಹಕರಿಗೆ ಪ್ಲೆಕ್ಸ್ ಪ್ಲಾನ್ ಗಳನ್ನು ಘೋಷಿಸಿದ್ದ ವೋಡಾಫೋನ್, ಇದೀಗ 4ಜಿ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ನೂತನ ಡೇಟಾ ಪ್ಯಾಕ್ ದರ ಘೋಷಿಸಿದೆ.

ಸದ್ಯ ಮುಂಬೈನಲ್ಲಿ ಮಾತ್ರ ನೂತನ 4 ಜಿ ಡೇಟಾ ಪ್ಯಾಕ್ ದರಗಳು ಜಾರಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಿಸಲಾಗುವುದೆಂದು ಹೇಳಲಾಗಿದೆ. ನೂತನ ದರದನ್ವಯ  2 ಜಿಬಿ 4 ಜಿ/3 ಜಿ ಡೇಟಾ 350 ರೂ. ಗೆ ದೊರೆಯಲಿದೆ (ಹಿಂದಿನ ದರ 450 ರೂ.), 3 ಜಿಬಿ 4ಜಿ/3ಜಿ ಡೇಟಾ ದರ 450 ರೂಪಾಯಿಗಳಾಗಿವೆ (ಹಿಂದಿನ ದರ 650 ರೂ.), 5 ಜಿಬಿ 4ಜಿ/3ಜಿ ಡೇಟಾ ಪ್ಯಾಕ್ ದರ 650 ರೂ. (ಹಿಂದಿನ ದರ 850 ರೂ.), 6 ಜಿಬಿ 4ಜಿ/3ಜಿ ಡೇಟಾ ದರ 750 ರೂ., 7 ಜಿಬಿ 4ಜಿ/3ಜಿ ಡೇಟಾ ಪ್ಯಾಕ್ ದರ 850 ರೂ., 10 ಜಿಬಿ 4ಜಿ/3ಜಿ ಡೇಟಾ ಪ್ಯಾಕ್ ದರ 999 ರೂ.,15 ಜಿಬಿ 4ಜಿ/3ಜಿ ಡೇಟಾ ಪ್ಯಾಕ್ ದರ 1,499 ರೂ. ಹಾಗೂ 20 ಜಿಬಿ 4ಜಿ/3ಜಿ ಡೇಟಾ ಪ್ಯಾಕ್ ದರ 1,999 ರೂಪಾಯಿಗಳಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...