alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್..! ‘ಜಿಯೋ ಲೈಫ್’ ಮೊಬೈಲ್ ಸ್ಫೋಟ

jio-lyf

ನೀವೇನಾದ್ರೂ ರಿಲಯನ್ಸ್ ಜಿಯೋ ಲೈಫ್ 4 ಜಿ ಮೊಬೈಲ್ ಕೊಂಡುಕೊಂಡಿದ್ರೆ ಸ್ವಲ್ಪ ಕೇರ್ ಫುಲ್ ಆಗಿರಿ. ಯಾಕಂದ್ರೆ ದೆಹಲಿಯಲ್ಲಿ ಜಿಯೋ ಲೈಫ್ ಮೊಬೈಲ್ ಸ್ಫೋಟಗೊಂಡಿದೆ.

ತನ್ವೀರ್ ಸಾದಿಕ್ ಅವರ ಜಿಯೋ ಲೈಫ್ ಮೊಬೈಲ್ ಸ್ಫೋಟಗೊಂಡಿದೆ. ಬಳಿಕ ಮೊಬೈಲ್ ಗೆ ಬೆಂಕಿ ಕೂಡ ಹೊತ್ತಿಕೊಂಡಿತ್ತು. ಸ್ಫೋಟಗೊಂಡಿರುವ ಮೊಬೈಲ್ ನ ಫೋಟೋಗಳನ್ನು ತನ್ವೀರ್ ಸಾದಿಕ್ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಜಾಗರೂಕತೆಯಿಂದಿರುವಂತೆ ಗ್ರಾಹಕರಲ್ಲಿ ಮನವಿ ಮಾಡಿದ್ದಾರೆ.

ತನ್ವೀರ್ ಪೋಸ್ಟ್ ಗೆ ರಿಲಯನ್ಸ್ ಜಿಯೋ ಕೂಡ ಪ್ರತಿಕ್ರಿಯಿಸಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ಫೋಟಕ್ಕೆ ಕಾರಣ ಏನು ಅನ್ನೋದನ್ನು ಪತ್ತೆ ಮಾಡುವುದಾಗಿ ತಿಳಿಸಿದೆ. ಗ್ರಾಹಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಅಂತಾ ಹೇಳಿದೆ. ವಿಶ್ವದ ಪ್ರಮುಖ ಮೊಬೈಲ್ ತಯಾರಕರು ಜಾಗತಿಕ ಗುಣಮಟ್ಟದ ಜಿಯೋ ಲೈಫ್ ಹ್ಯಾಂಡ್ ಸೆಟ್ ಗಳನ್ನು ತಯಾರಿಸಿದ್ದಾರೆ. ಕಟ್ಟುನಿಟ್ಟಾದ ಗುಣಮಟ್ಟ ನಿಯಂತ್ರಣ ಪ್ರಕ್ರಿಯೆಯನ್ನು ಅಳವಡಿಸಲಾಗಿದೆ ಅಂತಾ ಕಂಪನಿ ಸಮರ್ಥಿಸಿಕೊಂಡಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...