alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂನಲ್ಲಿ ಯಾಕೆ 500 ರೂ. ನೋಟು ಬರ್ತಿಲ್ಲ ಗೊತ್ತಾ..?

kh-4

ನೋಟು ನಿಷೇಧವಾಗಿ 17 ದಿನವಾದ್ರೂ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಹಳೆ ನೋಟು ಚಲಾವಣೆಯಾಗ್ತಿಲ್ಲ, ಕೈಗೆ ಸಿಕ್ಕ ಹೊಸ ನೋಟನ್ನು ಯಾರೂ ಸ್ವೀಕರಿಸುತ್ತಿಲ್ಲ. ಚಿಲ್ಲರೆ ಇಲ್ಲ ಎನ್ನುವ ಮಾತುಗಳೇ ಕೇಳಿ ಬರ್ತಾ ಇವೆ.

ಬಹುತೇಕ ಎಟಿಎಂಗಳಲ್ಲಿ 2 ಸಾವಿರ ರೂ. ನೋಟು ಮಾತ್ರ ಬರ್ತಾ ಇದೆ. 500 ರೂ. ನೋಟು ಸಿಕ್ಕಿದ್ರೆ ಅದೃಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮುಖ್ಯ ಕಾರಣ 500 ರೂಪಾಯಿ ನೋಟಿನ ಕೊರತೆ. 2 ಸಾವಿರ ಮುಖ ಬೆಲೆಯ ನೋಟುಗಳನ್ನು ಆರ್ ಬಿ ಐ ಪ್ರೆಸ್ ನಲ್ಲಿಯೇ ಪ್ರಿಂಟ್ ಮಾಡಲಾಗ್ತಾ ಇದೆ. 500 ರೂಪಾಯಿ ನೋಟುಗಳನ್ನು ನಾಸಿಕ್ ಹಾಗೂ ದೇವಾಸ್ ನಲ್ಲಿ ಮುದ್ರಿಸಲಾಗ್ತಾ ಇದೆ. ಆದ್ರೆ ಅಗತ್ಯಕ್ಕೆ ತಕ್ಕಷ್ಟು ನೋಟು ಮುದ್ರಣವಾಗ್ತಾ ಇಲ್ಲ.

2 ಸಾವಿರ ಮುಖ ಬೆಲೆಯ ನೋಟುಗಳ ಮುದ್ರಣ ಮೊದಲೇ ಶುರುವಾಗಿದೆ. ನೋಟು ನಿಷೇಧದ ನಂತ್ರ 500 ರೂಪಾಯಿ ಮುಖ ಬೆಲೆಯ ನೋಟುಗಳ ಮುದ್ರಣ ಶುರುವಾಗಿದ್ದು, ಹಾಗಾಗಿ ಈ ಅವ್ಯವಸ್ಥೆ ಎನ್ನಲಾಗ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...