alex Certify
ಕನ್ನಡ ದುನಿಯಾ       Mobile App
       

Kannada Duniya

ಇವರು ನಿಜ ಜೀವನದ ಪುನ್ಸುಕ್ ವಾಂಗ್ಡು

ತ್ರಿ ಈಡಿಯೆಟ್ಸ್ ಚಿತ್ರ ನೋಡಿದ್ದೀರಾ..? ಹಾಗಾದ್ರೆ ನಿಮಗೆ ಪುನ್ಸುಕ್ ವಾಂಗ್ಡು ಪಾತ್ರ ಗೊತ್ತಲ್ವಾ….ಅಮಿರ್ ಖಾನ್ ಈ ಪಾತ್ರ ಮಾಡಲು ಪ್ರೇರಣೆಯಾಗಿದ್ದು ಸೋನಂ ವಾಂಗ್ಚುಕ್.

ನಿಜ ಜೀವನದಲ್ಲಿ ಇಂಜಿನಿಯರ್ ಮತ್ತು ಸಂಶೋಧಕರಾಗಿರುವ ವಾಂಗ್ಚುಕ್ ಸಧ್ಯ ಭಾರತೀಯ ಸೈನಿಕರು ಗಡಿಯಲ್ಲಿ ಚಳಿ ನಿಯಂತ್ರಿಸಿಕೊಳ್ಳಲು ಹೊಸ ವಿಧಾನವನ್ನು ಕಂಡು ಹಿಡಿದಿದ್ದಾರೆ. ಸೋಲಾರ್ ವಿದ್ಯುತ್ ಬಳಕೆ ಮಾಡಿ, ಮಣ್ಣಿನ ಗುಡಿಸಿಲುಗಳನ್ನು ವಾಂಗ್ಚುಕ್ ಅಭಿವೃದ್ಧಿ ಪಡಿಸಿದ್ದಾರೆ. ಇದಕ್ಕೆ ಭಾರತೀಯ ರಕ್ಷಣಾ ಪಡೆ ಕೂಡಾ ಆಸಕ್ತಿ ತೋರಿಸಿದೆ.

ಈ ಗುಡಿಸಲುಗಳು ಪರಿಸರ ಸ್ನೇಹಿಯಾಗಿದ್ದು, ಜೊತೆಗೆ ಶೂನ್ಯ ತಾಪಮಾನದಲ್ಲೂ ಸೈನಿಕರನ್ನು ಬೆಚ್ಚಗಿಡುತ್ತವೆ. ಗುಡಿಸಲು ಒಳಗೆ 20 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವುದರಿಂದ, ಹೆಚ್ಚಿನ ಬಿಸಿ ಇಲ್ಲದೆ, ಸೈನಿಕರು ಅಲ್ಲಿ ಇರಬಹುದು.

ವಾಂಗ್ಚುಕ್ ಅವರು ಮಾದರಿಯ ಸೋಲಾರ್ ಗುಡಿಸಲೊಂದನ್ನ ನಿರ್ಮಿಸಿ, ಅದು ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಕೂಡಾ ಇಂತಹ 10 ಸಾವಿರ ಗುಡಿಸಲುಗಳನ್ನು ನಿರ್ಮಿಸಲು ಆಸಕ್ತಿ ತೋರಿಸಿದೆ. ಒಂದು ಗುಡಿಸಲು ಕಟ್ಟಲು ಕೇವಲ ಎರಡು ವಾರ ಬೇಕಾಗಲಿದೆ ಎಂದು ವಾಂಗ್ಚುಕ್ ತಿಳಿಸಿದ್ದಾರೆ.

ಈ ಮಧ್ಯೆ ವಾಂಗ್ಚುಕ್, ಲಡಾಖ್ ನಲ್ಲಿ ಮೌಂಟೇನ್ ಯುನಿವರ್ಸಿಟಿ ಅಡಿಯಲ್ಲಿ ಸಸ್ಯಗಳನ್ನು ಬೆಳೆಸಲು ಯೋಚಿಸುತ್ತಿದ್ದಾರೆ. ವರ್ಷವಿಡೀ ಸಸ್ಯಗಳನ್ನು ಬೆಳೆಸಿ ಇವುಗಳನ್ನು ಬೇಸಿಗೆಯಲ್ಲಿ ಹವಾಮಾನ ಉತ್ತಮವಾಗಲು ಹೊರಗಡೆ ಇಡಲಾಗುವುದು ಎಂದು ತಿಳಿಸಿದ್ದಾರೆ.

ವಾಂಗ್ಚುಕ್ ಕೇವಲ ಸಂಶೋಧಕರಲ್ಲ. ಇವರು ಲಡಾಕ್ ಶೈಕ್ಷಣಿಕ ವ್ಯವಸ್ಥೆಯನ್ನು ಸುಧಾರಿಸುವ ಗುರಿ ಹೊಂದಿದ್ದಾರೆ. ಅಲ್ಲದೆ ಬರೀ ಸೌರಶಕ್ತಿಯ ಮೇಲೆ ಕಾರ್ಯ ನಿರ್ವಹಿಸುವ SECMOL ಕ್ಯಾಂಪಸ್ ನ್ನು ವಿನ್ಯಾಸಗೊಳಿಸಿದ್ದಾರೆ.

ವಾಂಗ್ಚುಕ್ ಅವರ ಸಮಾಜಮುಖಿ ಕಾರ್ಯಕ್ಕೆ ನೂರಾರು ಪ್ರಶಸ್ತಿಗಳು ಅರಸಿ ಬಂದಿವೆ. ಅವರ ಪರಿಸರ ಕಾಳಜಿ ಬಗ್ಗೆ ಜಮ್ಮು ಕಾಶ್ಮೀರ ಸರ್ಕಾರದ ರಾಜ್ಯ ಪ್ರಶಸ್ತಿ, ಆರ್ಕಿಟೆಕ್ಚರ್ ಗಾಗಿ ಗ್ಲೋಬರ್ ಅವಾರ್ಡ್, ಎಂಟರ್ ಪ್ರೈಸಸ್ ಗಾಗಿ ರೋಲೆಕ್ಸ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ -ಪುರಸ್ಕಾರಗಳು ಬಂದಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...