alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟರ್ ನಲ್ಲಿ ಹರ್ಭಜನ್ ಸಿಂಗ್ ರುದ್ರತಾಂಡವ

harbhajan-singh twitter

ಮಹಿಳೆಯೊಬ್ಬಳು ಕೈಯಲ್ಲಿ ಹಸುಗೂಸು ಹಿಡಿದುಕೊಂಡಿದ್ದರೂ, ಮಾನವೀಯತೆ ತೋರದೇ, ಪೊಲೀಸ್ ಒಬ್ಬ ದರ್ಪ ತೋರಿದ್ದ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಟ್ಯಾಗ್ ಮಾಡಿದ್ದರು.

ಇದು ತೀವ್ರ ವಿವಾದಕ್ಕೆ ಕಾರಣವಾಗಿ, ರಾಜಕೀಯ ಪ್ರೇರಿತವಾಗಿ ‘ಭಜ್ಜಿ’ ಹೀಗೆಲ್ಲಾ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಕೆಲವರು ಟ್ವಿಟರ್ ನಲ್ಲಿ ಹರ್ಭಜನ್, ಸಾಮಾಜಿಕ ಕಳಕಳಿಯಿಂದ ಹೀಗೆ ಮಾಡಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಮತ್ತೆ ಕೆಲವರು, ಅಸಹಿಷ್ಣುತೆಯ ಅರ್ಥ ಬರುವ ರೀತಿಯಲ್ಲಿ ಹರ್ಭಜನ್ ಮಾತಾಡಿದ್ದಾರೆ. ಇದು ಸರಿಯಲ್ಲ ಎಂದು ಟೀಕಿಸಿದ್ದರು. ಟೀಕೆಯ ಭರದಲ್ಲಿ ಕೆಲವರು, ಹೇಳಿದ ಮಾತಿನಿಂದ ಭಜ್ಜಿ ಸಿಟ್ಟಾಗಿದ್ದಾರೆ.

ಟ್ವಿಟರ್ ನಲ್ಲಿ ತಮ್ಮನ್ನು ಕೆಟ್ಟದಾಗಿ ಟೀಕಿಸಿದವರಿಗೆ ಹರ್ಭಜನ್ ಖಾರವಾಗಿಯೇ ಪ್ರತಿಕ್ರಿಯೆ ನೀಡಿ, ಮೂರ್ಖರ ರೀತಿ ಮಾತಾಡಬೇಡಿ, ನಾನು ಪೊಲೀಸ್ ಆಗಿದ್ದರೆ, ನಿಮ್ಮನ್ನು ಒಳಗೆ ಹಾಕುತ್ತಿದ್ದೆ. ನಾನು ಮಾನವೀಯತೆಯಿಂದ ಹಾಕಿದ ಫೋಟೋವನ್ನು ಕೆಲವರು, ರಾಜಕೀಯಗೊಳಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...