alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ನೋಡಿ, ಅತಿ ಕಡಿಮೆ ಬೆಲೆಯ ಲ್ಯಾಪ್ ಟಾಪ್

rdp_thinbook

ಹೈದರಾಬಾದ್: ವಿಶ್ವದಲ್ಲಿಯೇ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಬಗ್ಗೆ ಕೇಳಿದ್ದೀರಿ. ಇದೀಗ ಭಾರತದ ಕಡಿಮೆ ಬೆಲೆಯ ಲ್ಯಾಪ್ ಟಾಪ್ ಕುರಿತಾದ ಮಾಹಿತಿ ಇಲ್ಲಿದೆ ನೋಡಿ. ಹೈದರಾಬಾದ್ ಮೂಲದ ಆರ್.ಡಿ.ಪಿ. ಕಂಪನಿ, ಕಡಿಮೆ ಬೆಲೆಯ ಲ್ಯಾಪ್ ಟಾಪ್ ಮಾರುಕಟ್ಟೆಗೆ ಪರಿಚಯಿಸಿದೆ.

ಈ ಲ್ಯಾಪ್ ಟಾಪ್ ಆಕರ್ಷಕವಾಗಿದ್ದು, 9,999 ರೂ. ಬೆಲೆ ನಿಗದಿಪಡಿಸಲಾಗಿದೆ. 14.1 ಇಂಚಿನ ಆರ್.ಡಿ.ಪಿ. ಥಿನ್ ಬುಕ್ ಹೆಸರಿನಲ್ಲಿ ಲ್ಯಾಪ್ ಟಾಪ್ ರಿಲೀಸ್ ಆಗಿದ್ದು, ವಿಂಡೋಸ್ 10 ಓ.ಎಸ್., 14.1 ಇಂಚಿನ ಲ್ಯಾಪ್ ಟಾಪ್ ಈ ಮಾದರಿಗಳಲ್ಲೇ ಅತಿ ಕಡಿಮೆ ಬೆಲೆಯದ್ದಾಗಿದೆ ಎಂದು ಹೇಳಲಾಗಿದೆ. 1.4 ಕೆ.ಜಿ. ತೂಕ ಹೊಂದಿರುವ ಇಂಟೆಲ್ ಅಟಮ್ x5-Z8300 SoC, 4 ಕೋರ್, 4 ಥ್ರೆಡ್ , 1.44 GHz ಬೇಸ್ ಕ್ಲಾಕ್, 1.84 GHz ಟರ್ಬೋ ಕ್ಲಾಕ್, 2 ಜಿ.ಬಿ.ರ್ಯಾಮ್, 32 ಜಿ.ಬಿ. ಸ್ಟೋರೇಜ್ ಒಳಗೊಂಡಿದೆ.

ಅಲ್ಲದೇ, 10,000 ಎಂ.ಎ.ಹೆಚ್. ಲಿಯೋ ಪಾಲಿಮರ್ ಬ್ಯಾಟರಿ ಸೇರಿದಂತೆ ಹಲವು ಸೌಲಭ್ಯಗಳಿವೆ. ಈಗಿನ ಟ್ರೆಂಡ್ ಗೆ ಅನುಗುಣವಾಗಿ ಆರ್.ಡಿ.ಪಿ. ಥಿನ್ ಬುಕ್ ಲ್ಯಾಪ್ ಟಾಪ್ ರಚಿಸಲಾಗಿದೆ. ಇದು ಹೆಚ್ಚು ಜನರನ್ನು ಆಕರ್ಷಿಸಿ ಜನಪ್ರಿಯವಾಗಲಿದೆ ಎಂಬ ವಿಶ್ವಾಸವನ್ನು ಕಂಪನಿ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...