alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಕಾರ್ಯ ನಿರ್ವಹಣೆ ಕುರಿತ ಮಾಹಿತಿ ಬಹಿರಂಗ

atm out of orderಎಟಿಎಂ ಗಳಲ್ಲಿ ಹಣ ಪಡೆಯಲು ಹೋದ ವೇಳೆ ‘ಔಟ್ ಆಫ್ ಸರ್ವೀಸ್’ ಎಂದು ಕಂಡು ಬರುವುದು ಸಾಮಾನ್ಯವಾಗಿದೆ. ತುರ್ತಾಗಿ ಹಣ ತೆಗೆಯಲೆಂದೇ ಎಟಿಎಂ ಸ್ಥಾಪನೆಗೊಂಡಿದ್ದರೂ ಅವುಗಳ ನಿರ್ವಹಣೆಯಲ್ಲಿ ಬ್ಯಾಂಕುಗಳು ವಿಫಲವಾಗಿರುವುದೇ ಇದಕ್ಕೆ ಕಾರಣವಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಸ್ವತಃ ಈ ಕುರಿತು ಪರಿಶೀಲನೆ ನಡೆಸಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ದೇಶದ ಒಟ್ಟು 4 ಸಾವಿರ ಎಟಿಎಂ ಗಳನ್ನು ಪರಿಶೀಲನೆ ನಡೆಸಿದ್ದು, ಈ ಪೈಕಿ ಮೂರರಲ್ಲಿ ಒಂದು ಎಟಿಎಂ ಕಾರ್ಯ ನಿರ್ವಹಿಸದೆ ಇರುವುದು ಕಂಡು ಬಂದಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ಎಸ್.ಎಸ್. ಮುಂದ್ರಾ ಈ ಕುರಿತು ಮಾಹಿತಿ ನೀಡಿದ್ದು, ಖಾಸಗಿ ವಲಯದ ಬ್ಯಾಂಕುಗಳು ಎಟಿಎಂ ಸ್ಥಾಪನೆ ಮಾಡಲು ಹಿಂದೇಟು ಹಾಕುತ್ತಿರುವುದೂ ಈ ವೇಳೆ ಕಂಡು ಬಂದಿದೆ ಎಂದಿದ್ದಾರೆ. ಬ್ಯಾಂಕುಗಳ ಬ್ರಾಂಚ್ ಇಲ್ಲದ ಕಡೆ ಎಟಿಎಂ ಗಳನ್ನು ಸ್ಥಾಪಿಸಲು ಸಲಹೆ ನೀಡಲಾಗಿದ್ದರೂ ನಿರ್ವಹಣಾ ವೆಚ್ಚದ ಕಾರಣಕ್ಕಾಗಿ  ಬ್ಯಾಂಕುಗಳು ಮುಂದೆ ಬರುತ್ತಿಲ್ಲವೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...