alex Certify
ಕನ್ನಡ ದುನಿಯಾ       Mobile App
       

Kannada Duniya

RBI ಗವರ್ನರ್ ಗೆ ಬಂತು ಬೆದರಿಕೆಯ ಇಮೇಲ್

urjit-patel-facebook

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಉರ್ಜಿತ್ ಪಟೇಲ್ ಅವರಿಗೆ ಬೆದರಿಕೆಯ ಇ-ಮೇಲ್ ಬಂದಿದೆ. 37 ವರ್ಷದ ವ್ಯಕ್ತಿಯೊಬ್ಬ ಇಮೇಲ್ ರವಾನಿಸಿದ್ದು, ಕೂಡಲೇ ಹುದ್ದೆ ತ್ಯಜಿಸುವಂತೆ ಬೆದರಿಸಿದ್ದಾನೆ. ಆರೋಪಿಯನ್ನು ನಾಗ್ಪುರದಲ್ಲಿ ಬಂಧಿಸಲಾಗಿದೆ.

ಫೆಬ್ರವರಿ 23ರಂದು ಇಮೇಲ್ ಕಳುಹಿಸಿರುವ ದುಷ್ಕರ್ಮಿ, ತಕ್ಷಣ ಹುದ್ದೆ ತ್ಯಜಿಸದೇ ಇದ್ದರೆ ಉರ್ಜಿತ್ ಪಟೇಲ್ ಮತ್ತವರ ಕುಟುಂಬದವರಿಗೆ ತೊಂದರೆ ಮಾಡುವುದಾಗಿ ಬರೆದಿದ್ದ. ಇಮೇಲ್ ಅನ್ನು ಆರ್ ಬಿಐ ಕಚೇರಿಯ ಹಿರಿಯ ಅಧಿಕಾರಿಗೆ ಕಳುಹಿಸಲಾಯ್ತು. ನಂತರ ಈ ಬಗ್ಗೆ ಮುಂಬೈನ ಸೈಬರ್ ಸೆಲ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಯ್ತು.

ನಾಗ್ಪುರದ ಸೈಬರ್ ಕೆಫೆಯಿಂದ ಇಮೇಲ್ ಕಳುಹಿಸಿರೋದು ತನಿಖೆ ವೇಳೆ ಪತ್ತೆಯಾಗಿತ್ತು. ನಾಗ್ಪುರಕ್ಕೆ ತೆರಳಿದ ಮುಂಬೈ ಸೈಬರ್ ಸೆಲ್ ಪೊಲೀಸರು ಆರೋಪಿ ವೈಭವ್ ಬದ್ದಲ್ವರ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ವೈಭವ್ ಸ್ನಾತಕೋತ್ತರ ಪದವೀಧರನಾಗಿದ್ದು, ನಿರುದ್ಯೋಗಿಯಾಗಿದ್ದ. ಹತಾಶೆಯಿಂದ ಆತ ಬೆದರಿಕೆ ಇಮೇಲ್ ಕಳಿಸಿದ್ದಾನೆ ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...