alex Certify
ಕನ್ನಡ ದುನಿಯಾ       Mobile App
       

Kannada Duniya

ದುಪ್ಪಟ್ಟಾಯ್ತು RBI ಗವರ್ನರ್ ವೇತನ

rbi

ಆರ್ ಬಿ ಐ ಗವರ್ನರ್ ಉರ್ಜಿತ್ ಪಟೇಲ್ ಮತ್ತವರ ಸಹೋದ್ಯೋಗಿಗಳ ವೇತನದಲ್ಲಿ ಭಾರೀ ಏರಿಕೆಯಾಗಿದೆ. ಗವರ್ನರ್ ಮೂಲ ವೇತನ 2.5 ಲಕ್ಷ ರೂಪಾಯಿ ಹಾಗೂ ಉಪ ಗವರ್ನರ್ ಗಳ ವೇತನ 2.25 ಲಕ್ಷ ರೂಪಾಯಿಯಷ್ಟಾಗಿದೆ. 2016ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದೆ.

ಸರ್ಕಾರದ ಇತರೆ ಬ್ಯಾಂಕ್ ಗಳ ಉನ್ನತ ಅಧಿಕಾರಿಗಳಿಗಿಂತ್ಲೂ ಆರ್ ಬಿ ಐ ಗವರ್ನರ್ ಗಳು ಕಡಿಮೆ ಸಂಬಳ ಪಡೆಯುತ್ತಿದ್ರು. ಈ ಮೊದಲು ಗವರ್ನರ್ ಮೂಲ ವೇತನ 90,000 ರೂಪಾಯಿ ಹಾಗೂ ಉಪ ಗವರ್ನರ್ ವೇತನ 80,000 ರೂಪಾಯಿ ಇತ್ತು. ಈಗ ವೇತನ ಪರಿಷ್ಕರಣೆ ಜೊತೆಗೆ ಆರ್ ಬಿ ಐ ಗವರ್ನರ್ ಮತ್ತು ಉಪ ಗವರ್ನರ್ ಗಳಿಗೆ ತುಟ್ಟಿ ಭತ್ಯೆ ಕೂಡ ಸಿಗಲಿದೆ.

ವೇತನ ಪರಿಷ್ಕರಣೆಗೂ ಮುನ್ನ ಬೇಸಿಕ್ ಸ್ಯಾಲರಿ, ತುಟ್ಟಿಭತ್ಯೆ ಎಲ್ಲವೂ ಸೇರಿ ಉರ್ಜಿತ್ ಪಟೇಲ್ 2,09,500 ರೂಪಾಯಿ ಸಂಬಳ ಪಡೆಯುತ್ತಿದ್ರು. ಈಗ ಅವರ ಅಂದಾಜು ವೇತನ 3.70 ಲಕ್ಷ ರೂಪಾಯಿಯಾಗಿದೆ. ಸದ್ಯ ಆರ್ ಬಿ ಐನಲ್ಲಿ ನಾಲ್ವರು ಉಪ ಗವರ್ನರ್ ಗಳಿದ್ದು, ಅವರು ಕೂಡ ಪರಿಷ್ಕೃತ ವೇತನ ಪಡೆಯಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...