alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟು ನಿಷೇಧ RBIಗೆ ಗೊತ್ತಾಗಿದ್ದೇ ಒಂದು ದಿನ ಮೊದಲು….

rs-1000-notes-759

ನೋಟು ನಿಷೇಧದ ಬಗೆಗಿನ ಕೆಲವೊಂದು ಸ್ವಾರಸ್ಯಕರ ಸಂಗತಿಗಳು ಬಯಲಾಗಿವೆ. 500 ಮತ್ತು 1000 ರೂಪಾಯಿ ನೋಟುಗಳ ನಿಷೇಧಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಂಗಳುಗಟ್ಟಲೆ ತಯಾರಿ ಮಾಡಿಕೊಂಡಿರಲಿಲ್ಲ. ನೋಟು ನಿಷೇಧದ ವಿಷಯ ಆರ್ ಬಿ ಐ ಗೆ ಗೊತ್ತಾಗಿದ್ದು ನವೆಂಬರ್ 7ರಂದು ಅಂದ್ರೆ ಪ್ರಧಾನಿ ಮೋದಿ ಘೋಷಣೆ ಮಾಡುವುದಕ್ಕೂ ಒಂದು ದಿನ ಮೊದಲು.

ಕೇಂದ್ರ ಸರ್ಕಾರದ ಸಲಹೆಯ ಮೇರೆಗೆ ಮರುದಿನವೇ ನೋಟು ನಿಷೇಧದ ಬಗ್ಗೆ ಶಿಫಾರಸು ಮಾಡಿರೋದಾಗಿ ಆರ್ ಬಿ ಐ ಹೇಳಿದೆ. ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ನೇತೃತ್ವದ ಸಂಸತ್ತಿನ ಇಲಾಖೆಯ ಹಣಕಾಸು ಸಂಬಂಧಿತ ಸಮಿತಿಗೆ ಆರ್ ಬಿ ಐ 7 ಪುಟಗಳ ವಿವರವನ್ನು ನೀಡಿದೆ.

ನಕಲಿ ನೋಟುಗಳ ಹಾವಳಿ, ಭಯೋತ್ಪಾದಕರಿಗೆ ಹಣಕಾಸಿನ ನೆರವು ಹಾಗೂ ಕಪ್ಪುಹಣ ನಿಯಂತ್ರಣಕ್ಕಾಗಿ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧ ಮಾಡುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿತ್ತು. ಅದರಂತೆ ನವೆಂಬರ್ 8ರಂದು ಸಭೆ ಸೇರಿದ ಆರ್ ಬಿ ಐ ಹಳೆ ನೋಟುಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದಿತ್ತು. ಆದ್ರೆ ಆರ್ ಬಿ ಐ ಶಿಫಾರಸಿನ ಮೇರೆಗೆ ನೋಟು ನಿಷೇಧ ಮಾಡಲಾಗಿದೆ ಎಂಬಂತೆ ಸರ್ಕಾರ ಎಲ್ಲೆಡೆ ಬಿಂಬಿಸಿತ್ತು.

 

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...