alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಖಾತೆಗೆ 2 ಲಕ್ಷ ರೂ. ಜಮಾ ಮಾಡಿದವರು ಓದಲೇಬೇಕಾದ ಸುದ್ದಿ

sbi-1

ನವೆಂಬರ್ 8 ರ ನಂತ್ರ ಅನೇಕರು ತಮ್ಮ ಖಾತೆಗೆ ಹಣ ಜಮಾ ಮಾಡಿದ್ದಾರೆ. ಎರಡು ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಹಣವನ್ನು ಖಾತೆಗೆ ಜಮಾ ಮಾಡಿದವರ ಸಂಖ್ಯೆ ಬಹಳಷ್ಟಿದೆ. ಈಗ ಸರ್ಕಾರದ ಕಣ್ಣು ಆ ಖಾತೆಗಳ ಮೇಲೆ ಬಿದ್ದಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಆರ್ ಬಿ ಐ ಬ್ಯಾಂಕುಗಳಿಗೆ ಸೂಚನೆಯೊಂದನ್ನು ನೀಡಿದೆ. ನೋಟು ನಿಷೇಧದ ನಂತ್ರ ಯಾರ ಖಾತೆಗೆ 2 ಲಕ್ಷಕ್ಕಿಂತ ಹೆಚ್ಚು ಹಣ ಜಮಾ ಆಗಿದೆಯೋ ಆ ಖಾತೆಗೆ ಪ್ಯಾನ್ ಕಾರ್ಡ್ ಲಿಂಕ್ ಆಗುವವರೆಗೆ ಅಥವಾ ಖಾತೆದಾರರು ಫಾರ್ಮ್ 60 ಭರ್ತಿ ಮಾಡುವವರೆಗೆ ಕೊಡು-ಕೊಳ್ಳುವಿಕೆಯನ್ನು ನಿಲ್ಲಿಸುವಂತೆ ಬ್ಯಾಂಕ್ ಗೆ ಸೂಚನೆ ನೀಡಿದೆ.

ಬಡವರು ಕಮಿಷನ್ ಆಸೆಗೆ ಅಥವಾ ಒತ್ತಡಕ್ಕೆ ಮಣಿದು ಬೇರೆಯವರ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದಾರೆಂಬ ಸಂಶಯ ಕೇಂದ್ರ ಸರ್ಕಾರಕ್ಕಿದೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸಲು ಆರ್ ಬಿ ಐ ಈ ಸೂಚನೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...