alex Certify
ಕನ್ನಡ ದುನಿಯಾ       Mobile App
       

Kannada Duniya

”ಜಮಾ ಆಗಿರುವ ಹಳೆ ನೋಟುಗಳ ಸಂಪೂರ್ಣ ವಿವರ ಇಂದೇ ನೀಡಿ”

rbi_vyexgej

ಹಳೆಯ 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳ ಜಮಾಗೆ ಇಂದು ಕೊನೆ ದಿನ. ಹಾಗೆ ಎಷ್ಟು ಹಣ ಬ್ಯಾಂಕ್ ಗೆ ಜಮಾ ಆಗಿದೆ ಹಾಗೆ ಎಷ್ಟು ಹಣವನ್ನು ಬದಲಾವಣೆ ಮಾಡಲಾಗಿದೆ ಎನ್ನುವ ಬಗ್ಗೆ ಬ್ಯಾಂಕ್ ಗಳು ಇಂದೇ ವರದಿ ನೀಡಬೇಕಾಗಿದೆ. ಎಲ್ಲ ಬ್ಯಾಂಕ್ ಗಳಿಗೆ ಆರ್ ಬಿ ಐ ಈ ಸಂಬಂಧ ಆದೇಶ ರವಾನೆ ಮಾಡಿದೆ.

ನವೆಂಬರ್ 8ರ ನಂತ್ರ ಎಷ್ಟು ಹಳೆ ನೋಟುಗಳು ಜಮಾ ಆಗಿವೆ. ಹಾಗೆ ಎಷ್ಟು ಹಣವನ್ನು ಬದಲಾವಣೆ ಮಾಡಲಾಗಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇ-ಮೇಲ್ ಮೂಲಕ ಆರ್ ಬಿ ಐ ಗೆ ರವಾನೆ ಮಾಡಬೇಕೆಂದು ಬ್ಯಾಂಕ್ ಗಳಿಗೆ ಆದೇಶ ಮಾಡಲಾಗಿದೆ.

ಇದ್ರ ಜೊತೆಗೆ ಡಿಸೆಂಬರ್ 31, ಶನಿವಾರದಂದು ಬ್ಯಾಂಕ್ ಗೆ ಜಮಾ ಆಗಿರುವ ಎಲ್ಲ ಹಳೆ ನೋಟುಗಳನ್ನು ಆರ್ ಬಿ ಐ ಶಾಖೆಗೆ ಸಲ್ಲಿಸುವಂತೆಯೂ ಸೂಚನೆ ನೀಡಲಾಗಿದೆ. ಡಿಸೆಂಬರ್ 31, 2016 ರ ನಂತ್ರ ಬ್ಯಾಂಕ್ ಬಳಿ ಹಳೆ ನೋಟುಗಳು ಇರಬಾರದೆಂದು ಸೂಚನೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...