alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿ ಸಿಕ್ಕಿಬಿದ್ದ ಮೇಯರ್

ravinder-gupta-759

ಸಿನಿಮಾ ಪ್ರದರ್ಶನಕ್ಕೂ ಮುನ್ನ ಥಿಯೇಟರ್ ಗಳಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡುವುದನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿದೆ. ಈ ವೇಳೆ ಪ್ರತಿಯೊಬ್ಬರೂ ಎದ್ದು ನಿಂತು ಗೌರವ ಸಲ್ಲಿಸಬೇಕೆಂದು ಸೂಚಿಸಿದೆ. ಆದ್ರೆ ಜನಸಾಮಾನ್ಯರು ಹಾಗಿರಲಿ ದೆಹಲಿಯ ಜನಪ್ರತಿನಿಧಿಯೊಬ್ಬರು ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿದ್ದಾರೆ.

ನಾರ್ತ್ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನ ಬಿಜೆಪಿ ಮೇಯರ್ ರವೀಂದರ್ ಗುಪ್ತಾ ತಮ್ಮ ಬೆಂಬಲಿಗರ ಜೊತೆ ರಾಷ್ಟ್ರಗೀತೆಯನ್ನು ಹಾಡಿದ್ದಾರೆ. ಜನ ಗಣ ಮನ ಹಾಡುವ ವೇಳೆ ‘ಭಾರತ ಭಾಗ್ಯವಿಧಾತಾ’ ಎನ್ನುವ ಬದಲು ‘ಜಾರತ ಭಾಗ್ಯವಿಧಾತಾ’ ಎಂದಿದ್ದಾರೆ. ಕೇವಲ ಇದೊಂದು ತಪ್ಪು ಮಾತ್ರವಲ್ಲ, ಹಾಡಿನುದ್ದಕ್ಕೂ ತಪ್ಪುಗಳ ಸರಮಾಲೆಯೇ ಇದೆ. ರವೀಂದರ್ ಗುಪ್ತಾ ಮಾಡಿರೋ ಯಡವಟ್ಟು ಈಗ ಸಾಮಾಜಿಕ ತಾಣಗಳಲ್ಲಿ ಹರಿದಾಡ್ತಾ ಇದೆ. ಟ್ವಿಟ್ಟರ್ ಬಳಕೆದಾರರೊಬ್ಬರು ಇದನ್ನು ಅಪ್ ಲೋಡ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...