alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಆಸ್ಪತ್ರೆ ಐಸಿಯುನಲ್ಲಿ ವೃದ್ದನನ್ನು ಕಚ್ಚಿದ ಇಲಿಗಳು

ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ, 70 ವರ್ಷದ ವೃದ್ಧ ಸಾವನ್ನಪ್ಪಿದ್ದು, ಮೃತನ ಮೈಮೇಲೆ ಇಲಿ ಕಚ್ಚಿದ ಗುರುತುಗಳಿವೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮಧ್ಯಪ್ರದೇಶದ ದಾಮೋಹ ಜಿಲ್ಲೆಯ ಸತ್ಪರ್ ಗ್ರಾಮದಲ್ಲಿ ಘಟನೆ ನಡೆದಿದೆ. ಐಸಿಯುನಲ್ಲಿ ವೃದ್ಧ ಜಗದೀಶ್ ಚಂದರ್ ಸಾವನ್ನಪ್ಪಿದ ಬಳಿಕ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಆಗ ಮೃತರ ಮೈ ಮೇಲೆ ಕಚ್ಚಿದ ಗುರುತುಗಳು ಕಂಡಿದ್ದು, ಕುಟುಂಬಸ್ಥರು ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ.

ಜಗದೀಶ್ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ, ಮಗ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಜಗದೀಶ್ ಸಾವನ್ನಪ್ಪಿದ್ದಾರೆ. ಮೃತರ ಎಡಗಣ್ಣಿನ ಬಳಿ ಕಚ್ಚಿದ ಗುರುತುಗಳು ಕಂಡಿವೆ. ಈ ಬಗ್ಗೆ ಕುಟುಂಬಸ್ಥರು ಸಿಬ್ಬಂದಿಯನ್ನು ಕೇಳಿದಾಗ, ಇಲಿ ದಾಳಿ ನಡೆಸಿದ್ದಾಗಿ ತಿಳಿಸಿದ್ದಾರೆ. ಈ ಬಗ್ಗೆ ತಮಗೆ ಈಗ ಮಾಹಿತಿ ಸಿಕ್ಕಿದ್ದು, ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿನ ಇಲಿಗಳ ನಾಶಕ್ಕೆ ಇಂದೋರ್ ಮೂಲದ ಕಂಪನಿಯನ್ನು ಈಗ ಸಂಪರ್ಕಿಸಲಾಗಿದೆ ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...