alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಸ್ಟೇಜ್ ನಲ್ಲಿ ಕಾಣಿಸ್ತು ಶೌಚಾಲಯ…!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ ಗ್ರಾಮ ಗ್ರಾಮಗಳಲ್ಲೂ ಪ್ರಭಾವ ಬೀರಿದೆ. ಜನರು ಮದುವೆ ಆಮಂತ್ರಣ ಪತ್ರಿಕೆಯಿಂದ ಹಿಡಿದು ಮದುವೆ ಮಂಟಪದಲ್ಲಿಯೂ ಶೌಚಾಲಯ ನಿರ್ಮಾಣ ಮಾಡಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಪಾಲ್ದಾನಾ ಗ್ರಾಮದಲ್ಲಿ ನಡೆದ ಮದುವೆಯೊಂದು ಇದಕ್ಕೆ ಸಾಕ್ಷಿಯಾಯ್ತು. ಮದುವೆ ಮಂಟಪದಲ್ಲಿ ಶೌಚಾಲಯದ ಮಾಡೆಲ್ ಇಡಲಾಗಿತ್ತು. ಮದುವೆಗೆ ಬಂದ ಜನರಿಗೆ ಇದರ ಅರ್ಥ ಅರಿಯೋದು ಕಷ್ಟವಾಗಲಿಲ್ಲ. ಮದುವೆ ವೇಳೆ ದಂಪತಿ, ಪಿಎಂ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ರು.

ಶೌಚಾಲಯದ ಬಗ್ಗೆಯೊಂದೇ ಅಲ್ಲ ಪ್ಲಾಸ್ಟಿಕ್ ನಿಷೇಧ ಹಾಗೂ ಆಹಾರವನ್ನು ಹಾಳು ಮಾಡದಂತೆ ನವದಂಪತಿ ಸಂದೇಶ ಸಾರಿದ್ರು. ಪ್ರದೇಶದ ಜನರಿಗೆ ನವ ದಂಪತಿ ಮಾದರಿಯಾದ್ರು. ಇದು ಹೊಸದೇನಲ್ಲ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ವಿಧಾನಗಳ ಮೂಲಕ ಜನರು ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...