alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹದ ನಂತ್ರ ಕೇರಳಿಗರನ್ನು ಕಾಡ್ತಿದೆ ಈ ಜ್ವರ

ಶತಮಾನದ ಅತಿ ದೊಡ್ಡ ಪ್ರವಾಹಕ್ಕೆ ಕೇರಳ ಕೊಚ್ಚಿಕೊಂಡು ಹೋಗಿದೆ. ಸದ್ಯ ಕೇರಳದ ಪರಿಸ್ಥಿತಿ ಸುಧಾರಿಸುತ್ತಿದೆ. ಪ್ರವಾಹ ಕಡಿಮೆಯಾಗಿದ್ದು, ಜನರು ಮನೆಗಳಿಗೆ ವಾಪಸ್ ಆಗ್ತಿದ್ದಾರೆ. ಆದ್ರೆ ಸಾವು ಮಾತ್ರ ಬೆನ್ನು ಬಿಡ್ತಿಲ್ಲ. ಪ್ರವಾಹದ ನಂತ್ರ ಇಲಿ ಜ್ವರ ಜನರ ಪ್ರಾಣ ತೆಗೆಯುತ್ತಿದೆ.

ಆಗಸ್ಟ್ 29 ರಿಂದ ಇಲ್ಲಿಯವರೆಗೆ ಕೇರಳದಲ್ಲಿ 9 ಮಂದಿ ಇಲಿ ಜ್ವರಕ್ಕೆ ಬಲಿಯಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಆಸ್ಪತ್ರೆಗಳಲ್ಲಿ 71 ಜನರು ಇಲಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. 123ಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿದೆ. ರಾಜ್ಯದ 13,800 ಕ್ಕೂ ಹೆಚ್ಚು ಮಂದಿಗೆ ರಕ್ತ ಪರೀಕ್ಷೆ ಮಾಡಲಾಗಿದೆಯಂತೆ. ರಾಜ್ಯದಲ್ಲಿ 11 ಮಂದಿಗೆ ಡೆಂಗ್ಯೂ ಕಾಣಿಸಿಕೊಂಡಿದೆಯಂತೆ.

ಕೇರಳ ಜನರಿಗೆ ರಾಜ್ಯ ಸರ್ಕಾರ, ಎಚ್ಚರಿಕೆ ಸಂದೇಶ ರವಾನೆ ಮಾಡಿದೆ. ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ಜ್ವರದ ಲಕ್ಷಣ ಕಂಡುಬಂದ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುವಂತೆ ಸೂಚನೆ ನೀಡಿದೆ. ರಾಜ್ಯದ ಜನತೆಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...