alex Certify
ಕನ್ನಡ ದುನಿಯಾ       Mobile App
       

Kannada Duniya

ಛತ್ತೀಸ್ ಘಡದಲ್ಲಿ ಪತ್ತೆಯಾಯ್ತು ಅಪರೂಪದ ಹಾವು

two headed snakeಛತ್ತೀಸ್ ಘಡದ ರಾಯ್ಪುರ್ ನಂದನವನ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಪರೂಪದ ಹಾವೊಂದು ಪತ್ತೆಯಾಗಿದೆ. ಎರಡು ತಲೆಯುಳ್ಳ ಇದು 45 ದಿನಗಳ ಹಿಂದೆ ಜನಿಸಿರಬಹುದೆಂದು ಅಂದಾಜಿಸಲಾಗಿದೆ.

ವಿಷಪೂರಿತವಲ್ಲದ ಈ ಹಾವು 10 ಸೆಂಟಿ ಮೀಟರ್ ಉದ್ದವಿದ್ದು, 20 ರಿಂದ 25 ಸೆಂಟಿ ಮೀಟರ್ ಗಳವರೆಗೆ ಬೆಳೆಯುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದನ್ನು ವೀಕ್ಷಿಸಲು ಪ್ರವಾಸಿಗರು ಆಗಮಿಸುತ್ತಿರುವ ಕಾರಣ ಸದ್ಯಕ್ಕೆ ಪ್ರತ್ಯೇಕವಾಗಿರಿಸಲಾಗಿದೆ.

ಅಪರೂಪದ ಎರಡು ತಲೆಗಳ ಹಾವುಗಳನ್ನು ಸಾಗಾಟ ಮಾಡುವ ತಂಡಗಳು ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜುಲೈ 7 ರಂದು ಹೈದರಾಬಾದ್ ಮೂಲದ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಎರಡು ತಲೆ ಹಾವು ಸಾಗಿಸುತ್ತಿದ್ದ ವೇಳೆ, ಕರ್ನಾಟಕದ ಯಾದಗಿರಿ ಜಿಲ್ಲೆಯ ಗುರು ಮಿಟ್ಕಲ್ ನಲ್ಲಿ ಪತ್ತೆ ಹಚ್ಚಿ, ಅವರುಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ಹಾವನ್ನು ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...