alex Certify
ಕನ್ನಡ ದುನಿಯಾ       Mobile App
       

Kannada Duniya

ನಾಲ್ಕುವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ

ದೇಶದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂಬ ಕೂಗು ಜೋರಾಗಿದೆ. ಆದ್ರೆ ಅತ್ಯಾಚಾರ ಪ್ರಕರಣ ಮಾತ್ರ ನಿಂತಿಲ್ಲ. ಅಪ್ರಾಪ್ತ ಬಾಲಕಿಯರು ಕಾಮುಕರಿಗೆ ಬಲಿಯಾಗ್ತಿದ್ದಾರೆ.

ಮಧ್ಯಪ್ರದೇಶದಲ್ಲಿ ಮತ್ತೆರಡು ಪ್ರಕರಣ ಬೆಳಕಿಗೆ ಬಂದಿದೆ. ನಾಲ್ಕುವರೆ ವರ್ಷದ ಬಾಲಕಿ ಹಾಗೂ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಎರಡೂ ಘಟನೆ ಬರೇಲಿಯಲ್ಲಿ ನಡೆದಿದೆ. ನಾಲ್ಕುವರೆ ವರ್ಷದ ಬಾಲಕಿಗೆ ತಿಂಡಿ ಆಸೆ ತೋರಿಸಿ ಕರೆದೊಯ್ದಿದ್ದ ಪಾಪಿ ಅತ್ಯಾಚಾರ ನಡೆಸಿ, ನಾಲ್ಕು ದಿನಗಳ ನಂತ್ರ ಮತ್ತೆ ಬಂದಿದ್ದ. ಈ ವೇಳೆ ಬಾಲಕಿ ಆತನ ಗುರುತು ಹಿಡಿದಿದ್ದಾಳೆ. ಸಾರ್ವಜನಿಕರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್ನೊಂದು ಘಟನೆ ಕೂಡ ಬರೇಲಿಯಲ್ಲೇ ನಡೆದಿದೆ. 15 ವರ್ಷದ ಬಾಲಕಿ ಸ್ನೇಹಿತೆ  ಅಣ್ಣನೇ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ದಾಖಲಾಗಿದ್ದು, ಆರೋಪಿಗಳಿಬ್ಬರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...