alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆಯ ರೇಪ್ ದೃಶ್ಯವನ್ನು ಪೊಲೀಸರಿಗೆ ನೀಡಿದ ಬಾಲಕಿ

mob rec mn19

ಲಖ್ನೋ: ವಿಕೃತಕಾಮಿಯೊಬ್ಬ ಮಗಳ ಮೇಲೆಯೇ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಘಟನೆಯಿಂದ ಮನನೊಂದ ಬಾಲಕಿ ಪ್ಲಾನ್ ಮಾಡಿ ಅಪ್ಪನ ಕಾಮುಕ ಕೃತ್ಯವನ್ನು ಬಯಲಿಗೆಳೆದಿದ್ದಾಳೆ.

ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯ ಓರಾಯ್ ಎಂಬಲ್ಲಿ ಬಾಲಕಿ ಮೇಲೆ ಮನೆಯಲ್ಲಿ ಅಪ್ಪನೇ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದು, ಇದರಿಂದ ಆಕೆಗೆ ಏನು ಮಾಡಬೇಕೆಂದು ತೋಚದಂತಾಗಿತ್ತು. ಅಮ್ಮನಿಗೆ ಹೇಳಿದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಅಮ್ಮನ ಮೇಲೆಯೇ ಅಪ್ಪ ರೇಗಾಡುತ್ತಿದ್ದ. ಮನೆಯಲ್ಲಿ ಮಗಳು ಒಬ್ಬಳೆ ಇದ್ದ ಸಂದರ್ಭದಲ್ಲೆಲ್ಲಾ ದೌರ್ಜನ್ಯ ಎಸಗುತ್ತಿದ್ದ. ಒಮ್ಮೆ ಆಕೆ ಗೆಳೆಯನ ಬಳಿ ಅಳಲು ತೋಡಿಕೊಂಡಿದ್ದಾಳೆ.

ಅಪ್ಪ ತನ್ನ ಮೇಲೆ ಅತ್ಯಾಚಾರ ಎಸಗುವಾಗ, ಗೆಳೆಯನಿಂದ ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿಸಿದ್ದಾಳೆ.  ಸಾಕ್ಷಿ ಸಮೇತ ಪೊಲೀಸ್ ಠಾಣೆಗೆ ಹೋಗಿ ತನ್ನ ಅಪ್ಪನ ನೀಚತನ ತೋರಿಸಿ, ದೂರು ಕೊಟ್ಟಿದ್ದು, ಆಕೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...