alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಳ ದಿನಾಚರಣೆ ಪಾರ್ಟಿಗೆ ಕರೆದು ಅತ್ಯಾಚಾರ

gang-rape 852

ಹೆಣ್ಣುಮಕ್ಕಳ ಮೇಲೆ ಸ್ನೇಹಿತರು, ಪರಿಚಯಸ್ಥರಿಂದಲೇ ದೌರ್ಜನ್ಯ ಹೆಚ್ಚಾಗಿ ನಡೆಯುತ್ತವೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಪ್ರೇಮಿಗಳ ದಿನಾಚರಣೆ ಪಾರ್ಟಿಗೆಂದು ಕರೆದು ಯುವತಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಗೆಳೆಯರೆಲ್ಲಾ ಸೇರಿ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಭರ್ಜರಿ ಪಾರ್ಟಿ ಮಾಡಿದ್ದು, ಪಾರ್ಟಿ ಮುಗಿದ ನಂತರ ವಿಕೃತಕಾಮಿಯೊಬ್ಬ ತನ್ನ ಗೆಳತಿಯ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಪುಣೆಯ ಹೋಟೆಲ್ ಒಂದರಲ್ಲಿ ಈ ಘಟನೆ ನಡೆದಿದೆ. ಪುಣೆ ಸಮೀಪದ ಪಟ್ಟಣವೊಂದರ ನಿವಾಸಿಯಾಗಿರುವ 23 ವರ್ಷದ ಯುವಕ ಅತ್ಯಾಚಾರ ಎಸಗಿದ ಆರೋಪಿ. ಪುಣೆಯ ಮಾಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಪ್ರೇಮಿಗಳ ದಿನಾಚರಣೆಯ ಪಾರ್ಟಿಗೆ ಬರುವಂತೆ ಆಹ್ವಾನ ನೀಡಿದ್ದ.

ಪುಣೆಯ ಹೋಟೆಲ್ ಒಂದರಲ್ಲಿ ಗೆಳೆಯರೆಲ್ಲಾ ಸೇರಿ ತಡರಾತ್ರಿವರೆಗೂ ಭರ್ಜರಿ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮುಗಿಸಿ ಗೆಳೆಯರೆಲ್ಲಾ ಹೋದ ಬಳಿಕ ಯುವಕ ಯುವತಿಯ ರೂಮಿಗೆ ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ. ಯುವತಿ ನೀಡಿದ ದೂರಿನನ್ವಯ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...