alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳೆಯನೊಂದಿಗೆ ಸೇರಿ ಗೆಳತಿಯನ್ನೇ ‘ರೇಪ್’ ಮಾಡಿದ ಕಾಮುಕ

Highest-Rape-Crime-in-Ethiopia

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೆ ಸಾಗುತ್ತಿದ್ದು, ಈ ನಡುವೆಯೇ ಕಾಮುಕನೊಬ್ಬ ತನ್ನ ಪ್ರೇಯಸಿಗೆ ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಹಾಕಿ ಕುಡಿಸಿ ಗೆಳೆಯನೊಂದಿಗೆ ಸೇರಿ ಅತ್ಯಾಚಾರವೆಸಗಿರುವ ಹೇಯ ಘಟನೆಯೊಂದು ನಡೆದಿದೆ.

ಘಾಜಿಯಾಬಾದ್‌‌ನ ಕೊತ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಯುವಕನೊಬ್ಬ 35 ವರ್ಷದ ಮಹಿಳೆಯನ್ನು ಪ್ರೀತಿಸುತ್ತಿದ್ದ. ಹಾಗಾಗಿ ಲಾಲ್ ಕ್ವಾನ್ ಹೋಟೆಲ್‌‌ನಲ್ಲಿ ಭೇಟಿಯಾಗುವಂತೆ ಹೇಳಿದ್ದು, ಇನಿಯನ ಮಾತಿಗೆ ಒಪ್ಪಿದ ಆಕೆ ಹೋಟೆಲ್ ಗೆ ಬಂದಿದ್ದಾಳೆ. ಈ ಸಮಯದಲ್ಲಿ ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಹಾಕಿ ಯುವತಿ ಪ್ರಜ್ಞೆ ತಪ್ಪಿದ ನಂತರ ಆಕೆಯ ಮೇಲೆ ಗೆಳೆಯನೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿ, ಸ್ಥಳೀಯ ರೈಲ್ವೆ ಟ್ರ್ಯಾಕ್‌ ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಕೊತ್ವಾಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಲೆಮರೆಸಿಕೊಂಡ ಕಾಮುಕರ ಪತ್ತೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...