alex Certify
ಕನ್ನಡ ದುನಿಯಾ       Mobile App
       

Kannada Duniya

16 ವರ್ಷಗಳ ಬಳಿಕ ಗಂಡನ ವಿರುದ್ಧವೇ ರೇಪ್ ಕೇಸ್

mahil-ra-hus

ಅಹಮದಾಬಾದ್: ಒಂದಲ್ಲ, ಎರಡಲ್ಲ ಅತ್ಯಾಚಾರ ನಡೆದು, ಬರೋಬ್ಬರಿ 16 ವರ್ಷಗಳ ಬಳಿಕ, ಮಹಿಳೆಯೊಬ್ಬಳು ಪತಿಯ ವಿರುದ್ಧವೇ ದೂರು ನೀಡಿದ ಪ್ರಕರಣ ವರದಿಯಾಗಿದೆ.

ದಂಧೂಕ ನಗರ ಠಾಣೆ ಪೊಲೀಸರಿಗೆ ದೂರು ನೀಡಿರುವ ಮಹಿಳೆಗೆ ನಾಲ್ವರು ಮಕ್ಕಳಿದ್ದಾರೆ. 16 ವರ್ಷದ ಹಿಂದೆ ತಾನು 13 ವರ್ಷದವಳಿದ್ದಾಗ, ಜಾತ್ರೆಗೆ ಹೋಗಿದ್ದೆ. ಆಗ, ಪಾನೀಯದಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ಕುಡಿಸಿದ ವ್ಯಕ್ತಿ ಅತ್ಯಾಚಾರ ಎಸಗಿದ್ದ ಎಂದು ದೂರಿದ್ದಾಳೆ.

ಆಕೆಯನ್ನು ದಂಧೂಕಕ್ಕೆ ಕರೆದುಕೊಂಡು ಬಂದು ಅತ್ಯಾಚಾರ ಎಸಗಿದ್ದ ಕಾಮುಕ, ನಂತರದಲ್ಲಿ ತಾನೇ ಮದುವೆಯಾಗಿದ್ದಾನೆ. 2006 ರಲ್ಲಿ ದಂಪತಿಗೆ ಮೊದಲ ಮಗುವಾಗಿದೆ.

ಈ ನಡುವೆ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಆತ, ಪತ್ನಿಗೇ ಕಿರುಕುಳ ನೀಡುತ್ತಿದ್ದ. ಹೀಗೆ ಹಲವು ವರ್ಷಗಳು ಕಳೆಯುವಷ್ಟರಲ್ಲಿ ಸಂತ್ರಸ್ಥೆ 4 ಮಕ್ಕಳ ತಾಯಿಯಾಗಿದ್ದಾಳೆ.

ಗಂಡನ ಕಿರುಕುಳ ತಾಳದೇ ಆತನನ್ನು ತೊರೆದು, ತವರು ಮನೆಗೆ ಹೋದರೆ ಆಕೆಗೆ ಆಘಾತ ಕಾದಿತ್ತು. ಆಕೆಯ ಅಪ್ಪ ಮೃತಪಟ್ಟಿದ್ದ. ಮನೆಯವರು ಆಕೆಯನ್ನು ಗುರುತಿಸಲಿಲ್ಲ.

ಕೊನೆಗೆ ದಂಧೂಕಕ್ಕೆ ಬಂದ ಮಹಿಳೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾ, ಕೂಲಿ ಕೆಲಸ ಮಾಡಿಕೊಂಡಿದ್ದಾಳೆ.

ಆಕೆಯ ಜೊತೆಗಾರರು ನೀಡಿದ ಸಲಹೆಯಂತೆ, ತಾನು 13 ವರ್ಷದವಳಿದ್ದ ಸಂದರ್ಭದಲ್ಲಿ ಅತ್ಯಾಚಾರ ಎಸಗಿದ ಗಂಡನ ವಿರುದ್ಧ ಕೇಸ್ ದಾಖಲಿಸಿದ್ದಾಳೆ.

ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಅಪ್ರಾಪ್ತೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಕಾರಣಕ್ಕೆ ಆತನಿಗೆ ಶಿಕ್ಷೆಯಾಗಲಿದೆ ಎಂದು  ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರವೀಣ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...