alex Certify
ಕನ್ನಡ ದುನಿಯಾ       Mobile App
       

Kannada Duniya

ಧಾರ್ಮಿಕ ನಗರಿ ಬಿಠೂರ್ ನಲ್ಲಿ ನಡೀತು ಬೆಚ್ಚಿ ಬೀಳಿಸುವ ಘಟನೆ

ಸುಂದರ ಪವಿತ್ರ ನಗರಿ ಬಿಠೂರ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಗುರುವಾರ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಕಾರಿನಲ್ಲಿ ಬಂದ ಕಾಮುಕರು ಯುವತಿ ಶವವನ್ನು ರಸ್ತೆ ಬದಿ ಎಸೆದು ಹೋಗಿದ್ದಾರೆ.

ರಾತ್ರಿ ಸುಮಾರು 11.15 ಕ್ಕೆ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಹೋಗ್ತಿದ್ದ ಕೆಲ ಕೂಲಿ ಕಾರ್ಮಿಕರು ಮೃತ ದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದ್ರೆ ಮೃತ ಹುಡುಗಿ ಗುರುತು ಪತ್ತೆಯಾಗಿಲ್ಲ. ಮೃತ ಯುವತಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕತ್ತು ಹಿಸುಕಿ ಕೊಲೆ ಮಾಡಿದ ಗುರುತಿದೆ. ಬಟ್ಟೆ ಅಸ್ತವ್ಯಸ್ತವಾಗಿದೆ. ರೇಪ್ ಮಾಡಿ ನಂತ್ರ ಹತ್ಯೆಗೈದಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಯುವತಿ ಬಿಳಿ ಲೆಹಂಗಾ, ನೀಲಿ ಕುರ್ತಾ ಹಾಗೂ ಕ್ರೀಂ ಕಲರ್ ನ ಸ್ವೆಟರ್ ಧರಿಸಿದ್ದಾಳೆ. ಶವದ ಬಳಿ ಕಾರಿನ ಚಕ್ರದ ಗುರುತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...