alex Certify
ಕನ್ನಡ ದುನಿಯಾ       Mobile App
       

Kannada Duniya

ಕುಣಿದು ಕುಣಿದು ಬಾರೇ ಎಂದ ಕಾಂಗ್ರೆಸ್ ಶಾಸಕ !

phpThumb_generated_thumbnail

ಕೆಲವು ರಾಜಕಾರಣಿಗಳು ತಮ್ಮ ಒಳ್ಳೆಯ ಕೆಲಸಗಳಿಂದ ಖ್ಯಾತಿ ಗಳಿಸಿದರೆ ಮತ್ತೆ ಕೆಲವರು ವಿವಾದಗಳಿಂದ ಕುಖ್ಯಾತಿ ಗಳಿಸುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಕಾಂಗ್ರೆಸ್​ ಶಾಸಕರೊಬ್ಬರು ನಂಗಾನಾಚ್​ ಕಾರ್ಯಕ್ರಮ ಆಯೋಜಿಸುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು. ಕಳೆದ ಕೆಲವು ದಿನಗಳ ಹಿಂದಷ್ಟೇ ಉತ್ತರಾಖಂಡ್​ ವಕ್ಫ್​ ಮಂಡಳಿ ಅಧ್ಯಕ್ಷರಾಗಿ ರಾವ್​ ಸಜ್ಜಾದ್​ ಅವರನ್ನು ಅಲ್ಲಿನ ರಾಜ್ಯ ಸರ್ಕಾರ ನೇಮಿಸಿತ್ತು. ಈ ಖುಷಿಯಲ್ಲಿ ಹರಿದ್ವಾರದ ಶಾಸಕ ಪ್ರಣವ್​ ಸಿಂಗ್​ ರೂರ್ಕಿಯಲ್ಲಿ ನೂತನ ವಕ್ಫ್​ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಬಾರ್ ಗರ್ಲ್ಸ್ ಗಳು ತುಂಡುಡುಗೆ ತೊಟ್ಟು ಕುಣಿದು ಕುಪ್ಪಳಿಸಿದ್ದಾರೆ. ಸಾಲದೆಂಬಂತೆ ಶಾಸಕ ಪ್ರಣವ್​ ಸಿಂಗ್​ ಹಾಗೂ ನೂತನ ವಕ್ಫ್​ ಅಧ್ಯಕ್ಷ ರಾವ್​ ಸಜ್ಜಾದ್​, ಬಾರ್​ ಗರ್ಲ್ಸ್​ಗಳ ಮೇಲೆ ನೋಟುಗಳನ್ನ ಎಸೆದು ತಾವೂ ಸಹ ಸ್ಟೆಪ್ ಹಾಕಿದ್ದಾರೆ.

ಇದು ವಿವಾದಕ್ಕೀಡಾಗುವ ಕುರಿತಾಗಿ ಆಪ್ತರೊಬ್ಬರು ಕಿವಿಯಲ್ಲಿ ಪಿಸುಗುಟ್ಟುತ್ತಿದ್ದಂತೆ ಯುವತಿಯರನ್ನು ಸ್ಟೇಜ್ ​ನಿಂದ ಕೆಳಗಿಳಿಸಿರುವ ಶಾಸಕರು ಆಗುವ ಮುಜುಗರವನ್ನು ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಈ ಘಟನೆ ಜನರ ಕಿವಿಗೆ ಬಿದ್ದಿದ್ದು ಶಾಸಕರ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...