alex Certify
ಕನ್ನಡ ದುನಿಯಾ       Mobile App
       

Kannada Duniya

ಯಾರಾಗಲಿದ್ದಾರೆ ಮುಂದಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ?

ಸುಪ್ರೀಂ ಕೋರ್ಟ್‌ ಹಿರಿಯ ನ್ಯಾಯಾಧೀಶರಾದ ನ್ಯಾ. ರಂಜನ್‌ ಗೋಗಾಯ್‌ ಅವರು ಮುಂದಿನ ಮುಖ್ಯ ನ್ಯಾಮೂರ್ತಿಯಾಗಲಿದ್ದಾರೆ. ಅ.3ಕ್ಕೆ ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ನ್ಯಾ. ದೀಪಕ್‌ ಮಿಶ್ರಾ ಅವರು ನಿವೃತ್ತರಾಗಲಿದ್ದು, ಅವರ ಬಳಿಕ, ಆ ಸ್ಥಾನಕ್ಕೆ ಗೋಗಾಯ್‌ ಅವರ ಹೆಸರು ಕೇಳಿ ಬರುತ್ತಿದೆ. ಅತ್ಯಂತ ಹಿರಿಯ ನ್ಯಾಯಾಧೀಶರನ್ನು ಹೆಸರಿಸುವ ಪದ್ದತಿ ಮುಂದುವರೆಯಲಿದ್ದು, ಆ ಪಟ್ಟಿಯಲ್ಲಿ ಗೋಗಾಯ್‌ ಹೆಸರೇ ಮೊದಲ ಸ್ಥಾನದಲ್ಲಿದೆ ಎನ್ನಲಾಗಿದೆ. ಮುಂದಿನ ವರ್ಷದ ನ.17ರ ವರೆಗೆ ಅವರು ಮುಖ್ಯ ನ್ಯಾಯಮೂರ್ತಿಯಾಗಿರಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕೆಲ ದಿನಗಳ ಹಿಂದೆ ಕಾನೂನು ಸಚಿವಾಲಯ, ನ್ಯಾ. ದೀಪಕ್‌ ಮಿಶ್ರಾ ಅವರ ಬಳಿ ಹೆಸರು ಸೂಚಿಸುವಂತೆ ಹೇಳಿತ್ತು ಎನ್ನಲಾಗಿದೆ. ಕೇಂದ್ರ, ದೀಪಕ್‌ ಮಿಶ್ರಾ ಅವರ ಶಿಫಾರಸ್ಸನ್ನು ಮಾನ್ಯ ಮಾಡಿದ್ದು, ಅ.3ರಂದು ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ ಎಂದು ತಿಳಿದು ಬಂದಿದೆ.

ವರ್ಷದ ಆರಂಭ ಜನವರಿಯಲ್ಲಿ ದೀಪಕ್ ಮಿಶ್ರಾ ವಿರುದ್ಧ ಹಿರಿಯ ನ್ಯಾಯಮೂರ್ತಿಗಳು ನಡೆಸಿದ ಸುದ್ದಿಗೋಷ್ಠಿಯಲ್ಲಿ ಗೋಗಾಯ್‌ ಸಹ ಇದ್ದರು. ಪ್ರಸ್ತುತ ಅಸ್ಸಾಂ ರಾಷ್ಟ್ರೀಯತೆ ನೋಂದಣಿ ವಿಚಾರವನ್ನು ವಿಚಾರಣೆ ನಡೆಸುತ್ತಿದ್ದರು. ಅ.1 ದೀಪಕ್‌ ಮಿಶ್ರಾ ಅವರು ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತಿ ಹೊಂದಲಿದ್ದಾರೆ. 2012ರಲ್ಲಿ ಗೋಗಾಯ್‌ ಸುಪ್ರೀಂ ಕೋರ್ಟ್‌ಗೆ ಬಡ್ತಿ ಹೊಂದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...