alex Certify
ಕನ್ನಡ ದುನಿಯಾ       Mobile App
       

Kannada Duniya

ಬೋಧ್ ಗಯಾ ಸರಣಿ ಬಾಂಬ್ ಸ್ಫೋಟ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಬಿಹಾರದ ಬೋಧ್ ಗಯಾ ಸರಣಿ ಬಾಂಬ್ ಸ್ಫೋಟ ಪ್ರಕರಣದ ಎಲ್ಲ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ 5 ಉಗ್ರರಿಗೆ ಎನ್ ಐ ಎ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಜುಲೈ 7,2013 ರಂದು ಬೋಧ್ ಗಯಾದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಐವರು ಉಗ್ರರು ಕಾರಣರಾಗಿದ್ದರು. ಘಟನೆಯಲ್ಲಿ ಐವರು ಬೌದ್ದ ಗುರುಗಳು ಸಾವನ್ನಪ್ಪಿದ್ದರು. ಕೆಲವರಿಗೆ ಗಾಯಗಳಾಗಿತ್ತು.

ನಾಲ್ಕು ವರ್ಷ, 10 ತಿಂಗಳ ನಂತ್ರ ಕೋರ್ಟ್ ತೀರ್ಪು ಕೋನೀಡಿದೆ. ಮೇ 24ರಂದು ವಿಚಾರಣೆ ಪೂರ್ಣಗೊಳಿಸಿದ್ದ ಕೋರ್ಟ್ ಐವರನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಜೂನ್ 1ಕ್ಕೆ ಶಿಕ್ಷೆ ಪ್ರಮಾಣ ಕಾಯ್ದಿರಿಸಿದ್ದ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಪಾಟ್ನಾ ಸಿವಿಲ್ ಕೋರ್ಟ್ 2013ರಲ್ಲಿ ರಚಿಸಿರುವ ಎನ್ ಐ ಎ ವಿಶೇಷ ಕೋರ್ಟ್ ನ ಮೊದಲು ತೀರ್ಪು ಇದಾಗಿದೆ. ಇಮ್ತಿಯಾಜ್ ಅನ್ಸಾರಿ, ಹೈದರ್ ಅಲಿ, ಒಮರ್ ಸಿದ್ದಿಕಿ, ಅಝರುದ್ದೀನ್ ಖುರೇಶಿ ಮತ್ತು ಮುಜಿಬ್ ಉಲ್ಲಾಹ್  ಜೀವಾವಧಿ ಶಿಕ್ಷೆಗೊಳಗಾದ ಉಗ್ರರಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...