alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿ ಮೇಲೆ ಅತ್ಯಾಚಾರವೆಸಗಿ ವಿಡಿಯೋ ವೈರಲ್ ಮಾಡಿದ ಚಿಕ್ಕಪ್ಪ

ಉತ್ತರ ಪ್ರದೇಶದಲ್ಲಿ ಮಹಿಳೆ, ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಿದೆ. ಹೆಣ್ಣು ಮಗಳು ಮನೆಯ ಹೊರಗೊಂದೇ ಅಲ್ಲ ಮನೆ ಒಳಗೂ ಸುರಕ್ಷಿತವಾಗಿಲ್ಲ. ರಾಮ್ಪುರ ಜಿಲ್ಲೆಯಲ್ಲಿ ಚಿಕ್ಕಪ್ಪನೇ ಯುವತಿ ಮೇಲೆ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಪ್ಪ ಯುವತಿ ಮೇಲೆ ಅತ್ಯಾಚಾರವೆಸಗಿ ಅದ್ರ ವಿಡಿಯೋ ಮಾಡಿದ್ದಾನೆ. ಮೊದಲು ಯುವತಿಗೆ ಬ್ಲಾಕ್ ಮೇಲ್ ಮಾಡಿದ್ದಲ್ಲದೆ ನಂತ್ರ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ವೈರಲ್ ಮಾಡಿದ್ದಾನೆ. ಯುವತಿ ಸಂಬಂಧಿಕರು ಚಿಕ್ಕಪ್ಪನ ವಿರುದ್ಧ ಅತ್ಯಾಚಾರ ಹಾಗೂ ಹಲ್ಲೆ ದೂರು ದಾಖಲಿಸಿದ್ದಾರೆ.

ಸಂಬಂಧಕ್ಕೆ ಕಳಂಕ ತರುವಂತಹ ಘಟನೆ ಕೋಟ್ವಾಲಿ ಶಹಾಬಾದ್ ನಲ್ಲಿ ನಡೆದಿದೆ. ಆರೋಪಿ ಚಿಕ್ಕಪ್ಪನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಮೊದಲು ಪಿಸ್ತೂಲ್ ತೋರಿಸಿ ಬೆದರಿಸಿ ಯುವತಿ ಮೇಲೆರಗಿದ ಚಿಕ್ಕಪ್ಪ ನಂತ್ರ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾನಂತೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...