alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದ 14ನೇ ರಾಷ್ಟ್ರಪತಿಯಾಗಿ ಕೋವಿಂದ್ ಪ್ರಮಾಣವಚನ

election_1500967356_618x347

ರಾಮ್ನಾಥ್ ಕೋವಿಂದ್ ದೇಶದ 14ನೇ ರಾಷ್ಟ್ರಪತಿಯಾಗಿ ಪ್ರಮಾನವಚನ ಸ್ವೀಕರಿಸಿದ್ದಾರೆ. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶ ಜೆ.ಎಸ್.ಖೇಹರ್ ಸಿಂಗ್, ಕೋವಿಂದ್ ಅವರಿಗೆ ಪ್ರಮಾಣ ವಚನ ಬೋಧಿಸಿದ್ರು. ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ  ಈಶ್ವರನ ಹೆಸರಿನಲ್ಲಿ ಕೋವಿಂದ್ ಪ್ರಮಾಣ ವಚನ ಸ್ವೀಕರಿಸಿದ್ರು.

ಈ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸೇರಿದಂತೆ ಕೇಂದ್ರದ ಮಂತ್ರಿಗಳು ಹಾಗೂ ಕೆಲ ರಾಜ್ಯ ಮಂತ್ರಿಗಳು ಉಪಸ್ಥಿತರಿದ್ದರು.

ರಾಷ್ಟ್ರಪತಿ ಹುದ್ದೆ ಸ್ವೀಕರಿಸಿದ ನಂತ್ರ ಮೊದಲ ಬಾರಿ ಮಾತನಾಡಿದ ಕೋವಿಂದ್ ದೇಶದ 125 ಕೋಟಿ ಜನರಿಗೆ ಧನ್ಯವಾದ ಹೇಳಿದ್ರು. ಸಂಸತ್ ಸದಸ್ಯನಾಗಿದ್ದ ನಾನು ಸಂಸತ್ ಹಾಲ್ ನಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ವಾದ ವಿವಾದದಲ್ಲಿ ಪಾಲ್ಗೊಂಡಿದ್ದೇನೆ. ಎಲ್ಲವೂ ನೆನಪಾಗ್ತಿದೆ ಎಂದು ಕೋವಿಂದ್ ಭಾಷಣದಲ್ಲಿ ಹೇಳಿದ್ರು.

ನಾವು ಗಾಂಧಿಜೀ ಹಾಗೂ ದೀನ್ ದಯಾಳ್ ಉಪಾಧ್ಯಾಯ್ ಕನಸನ್ನು ನನಸು ಮಾಡಬೇಕಿದೆ ಎಂದ ಕೋವಿಂದ್, ಪರಿಸರ ರಕ್ಷಣೆ ಮಾಡುತ್ತಿರುವ ಬುಡಕಟ್ಟು ಜನಾಂಗದ ಬಗ್ಗೆಯೂ ಮಾತನಾಡಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...