alex Certify
ಕನ್ನಡ ದುನಿಯಾ       Mobile App
       

Kannada Duniya

ಯಾರಾಗಲಿದ್ದಾರೆ 14 ನೇ ರಾಷ್ಟ್ರಪತಿ..?

ram-merak

ನವದೆಹಲಿ: ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ಇಂದು ನಡೆಯಲಿದ್ದು, ಸಂಜೆಯೊಳಗೆ ಫಲಿತಾಂಶ ಪ್ರಕಟವಾಗಲಿದೆ.

ರಾಷ್ಟ್ರಪತಿ ಭವನದಲ್ಲಿ 11 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಸಂಜೆ 4 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.

ಎಣಿಕೆಗೆ 4 ಟೇಬಲ್ ಗಳನ್ನು ಹಾಕಲಾಗಿದ್ದು, ಮೊದಲು ಸಂಸತ್ ಭವನ ಮತಗಟ್ಟೆಯ ಮತ ಎಣಿಕೆ ನಡೆಯಲಿದೆ. ಒಟ್ಟು 8 ಸುತ್ತಿನಲ್ಲಿ ಎಣಿಕೆ ನಡೆಯಲಿದ್ದು, ಈ ಬಾರಿ ದಾಖಲೆಯ ಶೇ. 99 ರಷ್ಟು ಮತದಾನವಾಗಿದೆ.

32 ಕೇಂದ್ರಗಳಲ್ಲಿ ಮತದಾನ ನಡೆದಿದ್ದು, 4170 ಶಾಸಕರು 770 ಸಂಸದರು ಮತ ಚಲಾಯಿಸಿದ್ದಾರೆ. ಸಂಸದರ ಮತಕ್ಕೆ 708 ಮತ ಮೌಲ್ಯವಿದ್ದು, ಶಾಸಕರಿಗೆ ಆಯಾ ರಾಜ್ಯಗಳ ಜನ ಸಂಖ್ಯೆ ಆಧರಿಸಿ ಮತ ಮೌಲ್ಯ ನಿರ್ಧರಿಸಲಾಗಿದೆ.

ಶೇ. 63 ರಷ್ಟು ಬೆಂಬಲ ಹೊಂದಿರುವ ಎನ್.ಡಿ.ಎ. ಬೆಂಬಲಿತ ಅಭ್ಯರ್ಥಿ ರಾಮನಾಥ್ ಕೋವಿಂದ್ ದೇಶದ 14 ನೇ ರಾಷ್ಟ್ರಪತಿಯಾಗುವ ಸಾಧ್ಯತೆ ಇದೆ. ಯು.ಪಿ.ಎ. ಅಭ್ಯರ್ಥಿ ಮೀರಾ ಕುಮಾರ್ ಕೂಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...