alex Certify
ಕನ್ನಡ ದುನಿಯಾ       Mobile App
       

Kannada Duniya

ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದೇನು..?

ram-ko

ನವದೆಹಲಿ: ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ಮುಕ್ತಾಯವಾಗಿದ್ದು, ಎನ್.ಡಿ.ಎ. ಬೆಂಬಲಿತ ರಾಮನಾಥ್ ಕೋವಿಂದ್ ಆಯ್ಕೆಯಾಗಿದ್ದಾರೆ.

ದೇಶದ 14 ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಆಯ್ಕೆಯಾಗಿದ್ದು, ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

4170 ಶಾಸಕರು 770 ಸಂಸದರು ಮತ ಚಲಾಯಿಸಿದ್ದು, ಒಟ್ಟು ಮತಗಳ ಮೌಲ್ಯ 10,98,903 ಆಗಿತ್ತು. ಅದರಲ್ಲಿ ಕೋವಿಂದ್ 7,02,044 ಮತಗಳನ್ನು(ಶೇ. 64) ಪಡೆದರೆ, ಯು.ಪಿ.ಎ. ಬೆಂಬಲಿತ ಅಭ್ಯರ್ಥಿ ಮೀರಾ ಕುಮಾರ್ 3,67,314(ಶೇ. 34) ಮತಗಳನ್ನು ಪಡೆದಿದ್ದಾರೆ. 3,34,730 ಮತಗಳ ಅಂತರದಿಂದ ಕೋವಿಂದ್ ಆಯ್ಕೆಯಾಗಿದ್ದಾರೆ.

ರಾಷ್ಟ್ರಪತಿಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಕೋವಿಂದ್, ತಮ್ಮ ಮೇಲೆ ವಿಶ್ವಾಸವಿಟ್ಟ ಎಲ್ಲರಿಗೂ ಧನ್ಯವಾದಗಳು. ಇದು ಭಾವನಾತ್ಮಕ ಸಮಯವಾಗಿದೆ. ಮುಂದೆ ಮಹತ್ತರ ಜವಾಬ್ದಾರಿ ಇದೆ. ಸಂವಿಧಾನಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.

ಅದೇ ರೀತಿ ಮೀರಾ ಕುಮಾರ್ ಅವರಿಗೂ ನೂತನ ರಾಷ್ಟ್ರಪತಿ ಧನ್ಯವಾದ ಹೇಳಿದ್ದಾರೆ. ಮೀರಾ ಕುಮಾರ್, ನೂತನ ರಾಷ್ಟ್ರಪತಿಗಳನ್ನು ಅಭಿನಂದಿಸಿದ್ದು, ಸೈದ್ಧಾಂತಿಕ ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...