alex Certify
ಕನ್ನಡ ದುನಿಯಾ       Mobile App
       

Kannada Duniya

ನಾನು ಯಾವುದೇ ಪಕ್ಷದ ಅಭ್ಯರ್ಥಿಯಲ್ಲ ಎಂದ್ರು ರಾಮ್ನಾಥ್ ಕೋವಿಂದ್

nomination_2017623_124834_23_06_2017

ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್ನಾಥ್ ಕೋವಿಂದ್ ನಾಮಪತ್ರ ಸಲ್ಲಿಸಿದ್ದಾರೆ. ಶುಕ್ರವಾರ ರಾಮ್ನಾಥ್ ಸಂಸತ್ ಭವನದಲ್ಲಿ ನಾಮಪತ್ರ ಸಲ್ಲಿಸಿದ್ರು. ಈ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಲಾಲ್ ಕೃಷ್ಣ ಅಡ್ವಾಣಿ, ಅಮಿತ್ ಶಾ ಹಾಗೂ ಸುಷ್ಮಾ ಸ್ವರಾಜ್ ಸೇರಿದಂತೆ 48 ನಾಯಕರು ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಕೆ ನಂತ್ರ ಮಾತನಾಡಿದ ಕೋವಿಂದ್, ರಾಜ್ಯಪಾಲರ ಹುದ್ದೆ ಸ್ವೀಕರಿಸಿದ ನಂತ್ರ ನಾನು ಯಾವುದೇ ಪಕ್ಷವನ್ನು ಪ್ರತಿನಿಧಿಸಿಲ್ಲ. ನನ್ನ ಪ್ರಕಾರ ರಾಷ್ಟ್ರಪತಿ ಹುದ್ದೆ ಪಕ್ಷಪಾತ ರಾಜಕೀಯಕ್ಕಿಂತ ಮೇಲಿದೆ. ರಾಷ್ಟ್ರಪತಿಗಳು ಮೂರು ಸೇನೆಗೆ ಪ್ರಮುಖರಾಗಿರುತ್ತಾರೆ. ಗಡಿ ಭದ್ರತೆ ಪ್ರಮುಖ ವಿಷಯವಾಗುತ್ತದೆ. ರಾಷ್ಟ್ರಪತಿ ಹುದ್ದೆಗೆ ನಾನು ನಾಮಪತ್ರ ಸಲ್ಲಿಸಿದ್ದೇನೆ. ಪಿಎಂ ಮೋದಿ ನೇತೃತ್ವದ  ಎನ್ ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳು ನನಗೆ ಬೆಂಬಲ ನೀಡಿವೆ. ಎನ್ ಡಿಎ ಹೊರತಾಗಿ ಇನ್ನೂ ಕೆಲ ಪಕ್ಷಗಳು ನನ್ನನ್ನು ಬೆಂಬಲಿಸಿದ್ದು ಅವರಿಗೆ ಧನ್ಯವಾದ ಎಂದಿದ್ದಾರೆ.

ಇದಕ್ಕೂ ಮೊದಲು ಕೋವಿಂದ್ ಅವರನ್ನು ಬೆಂಬಲಿಸಿ ಎನ್ ಡಿಎ ಒಂದು ರೀತಿಯಲ್ಲಿ ಶಕ್ತಿ ಪ್ರದರ್ಶನ ಮಾಡ್ತು. ಹಿರಿಯ ನಾಯಕರನ್ನು ಹೊರತುಪಡಿಸಿ 20 ರಾಜ್ಯಗಳ ಸಿಎಂಗಳು ಸಂಸತ್ ಭವನಕ್ಕೆ ಬಂದಿದ್ದಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...