alex Certify
ಕನ್ನಡ ದುನಿಯಾ       Mobile App
       

Kannada Duniya

ರಾಮ ಮಂದಿರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ

ರಾಮಜನ್ಮಭೂಮಿ ವಿವಾದವಿನ್ನೂ ಸುಪ್ರೀಂಕೋರ್ಟ್ ನಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಆದ್ರೆ ಅದಕ್ಕೂ ಮೊದಲೇ ಉತ್ತರ ಪ್ರದೇಶದ ಸಚಿವ ವಿವಾದಾತ್ಮಕ ಹೇಳಿಕೆ ನೀಡಿ ವಿವಾದದ ಕಾವು ಹೆಚ್ಚಿಸಿದ್ದಾರೆ.

ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಚಿವರಾಗಿರುವ ಮುಕ್ತ್ ಬಿಹಾರಿ ವರ್ಮಾ, ಸುಪ್ರೀಂಕೋರ್ಟ್ ನಮ್ಮದಾಗಿರೋದ್ರಿಂದ ಮಂದಿರ ನಿರ್ಮಾಣ ಮಾಡೇ ಮಾಡ್ತೀವಿ ಅನ್ನೋ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕ ಸಮಾರಂಭ ಒಂದರಲ್ಲಿ ಮಾತನಾಡುತ್ತಿದ್ದ ವರ್ಮಾ, ರಾಮ ಮಂದಿರ ನಿರ್ಮಾಣ ಮಾಡೋದು ಖಚಿತ ಅನ್ನೋ ಹೇಳಿಕೆ ನೀಡಿದ್ರು.

ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಪತ್ರಕರ್ತರು ರಾಮ ಮಂದಿರ ವಿವಾದದ ತೀರ್ಪು ಇನ್ನೂ ಹೊರಬಂದಿಲ್ಲ. ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ಇತ್ಯರ್ಥವಾಗಬೇಕಿದೆ ಅನ್ನೋ ವಿಚಾರವನ್ನ ಮಂತ್ರಿಗಳಿಗೆ ನೆನಪಿಸಿದ್ರು.

ಹಾಗಿದ್ದರು ವರ್ಮಾ ಆ ಎಚ್ಚರಿಕೆಗೂ ತಲೆ ಕೆಡಿಸಿಕೊಳ್ಳದೆ ವಿಚಾರದ ಸೂಕ್ಷ್ಮತೆಯನ್ನು ಅರಿಯದೆ ರಾಮ ಮಂದಿರವೂ ನಮ್ಮದೆ, ನ್ಯಾಯ ಪಾಲಿಕೆಯೂ ನಮ್ಮದೆ , ವಿಧಾನ ಪಾಲಿಕೆಯೂ ನಮ್ಮದೇ, ಸುಪ್ರೀಂಕೋರ್ಟ್ ಕೂಡ ನಮ್ಮದೇ, ನ್ಯಾಯಾಂಗವೂ ನಮ್ಮದೇ. ಇಡೀ ದೇಶ ನಮ್ಮದೇ ಆಗಿರುವಾಗ ರಾಮ ಮಂದಿರ ನಿರ್ಮಾಣ ಶತಸಿದ್ಧ ಅನ್ನೋ ಹೇಳಿಕೆ ನೀಡಿದ್ದಾರೆ.

ವರ್ಮಾ ಹೇಳಿಕೆಗೆ ವಿಪಕ್ಷಗಳು ಈಗಾಗ್ಲೇ ಕೆಂಗಣ್ಣು ಬೀರಿವೆ. ಮುಂದಿನ ಲೋಕಸಭಾ ಚುನಾವಣೆಯ ವೇಳೆ ಈ ಹೇಳಿಕೆಯನ್ನು ಮುಂದಿಟ್ಟುಕೊಂಡೇ ಕೇಸರಿ ಪಾಳಯದ ವಿರುದ್ಧ ತಂತ್ರಗಾರಿಕೆ ನಡೆಸುವ ಸಾಧ್ಯತೆಗಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...