alex Certify
ಕನ್ನಡ ದುನಿಯಾ       Mobile App
       

Kannada Duniya

ಪಪ್ಪಾಯಿಗೆ 5000, ಹಸಿಮೆಣಸಿನಕಾಯಿಗೆ 1000 ರೂ.

ಜೈಲು ಸೇರಿರುವ ಡೇರಾ ಸಚ್ಛಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ನ ಒಂದೊಂದೇ ಅಕ್ರಮಗಳು ಬೆಳಕಿಗೆ ಬರ್ತಿವೆ. ಡೇರಾ ಸಚ್ಛಾ ಸೌಧದಲ್ಲಿ ನಡೆಯುತ್ತಿದ್ದ ದಂಧೆ ಬಗ್ಗೆ ಕೇಳಿದ್ರೆ ಜನಸಮಾನ್ಯರು ಬೆಚ್ಚಿ ಬೀಳೋದು ಗ್ಯಾರಂಟಿ. ಮುಗ್ಧ ಜನರನ್ನು ಸುಲಿಗೆ ಮಾಡಲು ಏನ್ಬೇಕೋ ಎಲ್ಲವನ್ನೂ ಮಾಡ್ತಿದ್ದ ಈ ಢೋಂಗಿ ಬಾಬಾ.

ಕೃಷಿಯಲ್ಲಿ ರಾಮ್ ರಹೀಂಗೆ ಆಸಕ್ತಿ ಇತ್ತು. ಡೇರಾ ಕೋಟೆಯೊಳಗೆ ಹಣ್ಣು ತರಕಾರಿಗಳನ್ನು ಬೆಳೆಯಲಾಗುತ್ತಿತ್ತು. ಆದ್ರೆ ಅವುಗಳ ಬೆಲೆ ಕೇಳಿದ್ರೆ ಎಂಥವರು ಕೂಡ ದಂಗಾಗಿ ಹೋಗ್ತಾರೆ. ಅಲ್ಲಿ ಬೆಳೆದ ಹಣ್ಣು ತರಕಾರಿಗಳಲ್ಲಿ ವಿಶಿಷ್ಟ ಶಕ್ತಿಯಿದೆ ಅಂತಾ ಬಾಬಾ ಜನರನ್ನು ನಂಬಿಸಿದ್ದ.

ಒಂದು ಕ್ಯಾಪ್ಸಿಕಂ ಅನ್ನು 500-2000 ರೂಪಾಯಿಗೆ ಮಾರುತ್ತಿದ್ದ. 100 ಗ್ರಾಂ ಬೆಲ್ಲದ ಬೆಲೆ ಎಷ್ಟು ಗೊತ್ತಾ? 1.25 ಲಕ್ಷ ರೂಪಾಯಿ. ಒಂದು ಪಪ್ಪಾಯ ಹಣ್ಣಿಗೆ 5000, ಒಂದು ಹಸಿಮೆಣಸಿನ ಕಾಯಿಗೆ 1000, 5 ಗ್ರಾಂ ಬಟಾಣಿಗೆ 1000, 2 ಟೊಮ್ಯಾಟೋಗೆ 2000, ಒಂದು ಬದನೆಕಾಯಿಗೆ 2000 ರೂಪಾಯಿ ಬೆಲೆ ನಿಗದಿ ಮಾಡಿದ್ದ.

ಭಂಗೀದರ್ಸ್ ಅಂತಾ ಕರೆಸಿಕೊಳ್ತಿದ್ದ ರಾಮ್ ರಹೀಂನ ಚೇಲಾಗಳು ಭಕ್ತರ ಮನೆಗೆ ಈ ತರಕಾರಿಗಳನ್ನು ವಿತರಣೆ ಮಾಡ್ತಾ ಇದ್ರು. ನೂರು ಪಟ್ಟು ಅಧಿಕ ಹಣವನ್ನು ವಸೂಲಿ ಮಾಡುತ್ತಿದ್ರು. ತಾನೇನೋ ದಾನ ಧರ್ಮ ಮಾಡ್ತಿದ್ದೀನಿ ಅನ್ನೋ ರೀತಿ ಪೋಸ್ ಕೊಡ್ತಾ ಇದ್ದ ಬಾಬಾ, ಜನರಿಂದ ಹಣ ಪೀಕುವ ದಂಧೆ ನಡೆಸ್ತಾ ಇದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...