alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪನ ಕಾಮತೃಷೆಗೆ ಹನಿಪ್ರೀತ್ ಸಿಂಗ್ ಸಾಥ್

ಚಂಡೀಗಡ: ಇಬ್ಬರು ಸಾದ್ವಿಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ, ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂ ಸಿಂಗ್ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

ಬಾಬಾ ಜೈಲು ಸೇರುತ್ತಿದ್ದಂತೆ ಆತನ ಒಂದೊಂದೇ ನೀಚ ಕೃತ್ಯಗಳು ಬೆಳಕಿಗೆ ಬರತೊಡಗಿವೆ. ಆಶ್ರಮದಲ್ಲಿ ಶೋಧ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಅಬಾರ್ಷನ್ ಕ್ಲಿನಿಕ್, ರಹಸ್ಯ ಕೋಣೆಗಳು, ಕರೆನ್ಸಿ, ಐಷಾರಾಮಿ ಕಾರ್, ಲೇಬಲ್ ಇಲ್ಲದ ಔಷಧ ಕಂಡು ಬಂದಿದ್ದವು.

ಈಗ ಮತ್ತೊಂದು ಸಂಗತಿ ಬಯಲಾಗಿದೆ. ಆಶ್ರಮದಲ್ಲಿದ್ದ ಶಾಲಾ ಬಾಲಕಿಯರೊಂದಿಗೆ ಬಾಬಾ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಗುರ್ಮಿತ್ ನ ಈ ನೀಚ ಕೃತ್ಯಕ್ಕೆ ದತ್ತುಪುತ್ರಿ ಹನಿಪ್ರೀತ್ ಸಿಂಗ್ ಸಾಥ್ ನೀಡಿದ್ದಳು.

ಆಶ್ರಮದಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯರನ್ನು ಹನಿಪ್ರೀತ್ ಬಾಬಾನ ಬಳಿಗೆ ಕರೆದೊಯ್ಯುತ್ತಿದ್ದಳು. ಬಾಬಾ ಅಮಾಯಕ ಅಪ್ರಾಪ್ತರ ಮೇಲೆ ಅತ್ಯಾಚಾರ ಎಸಗುತ್ತಿದ್ದ.

ಬಾಲಕಿಯರು ಇದನ್ನು ತಮ್ಮ ಪೋಷಕರಿಗೆ ಹೇಳಿದ್ದರೂ, ಅವರು ನಂಬಿರಲಿಲ್ಲ. ಆಶ್ರಮದಲ್ಲಿ ಈ ಹಿಂದೆ ಓದಿದ್ದ ಈಗ ದೂರದ ಊರುಗಳಲ್ಲಿ ನೆಲೆಸಿರುವ ಹಿರಿಯ ವಿದ್ಯಾರ್ಥಿನಿಯರು ಬಾಬಾನ ನೀಚ ಕೃತ್ಯಗಳ ಕುರಿತಾಗಿ ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...