alex Certify
ಕನ್ನಡ ದುನಿಯಾ       Mobile App
       

Kannada Duniya

ಸೇವೆ ಹೆಸರಿನಲ್ಲಿ ಪ್ರತಿ ತಿಂಗಳು 922 ಕೋಟಿ ಗಳಿಸ್ತಿದ್ದ ರಾಮ್ ರಹೀಂ..!

ಅತ್ಯಾಚಾರದ ಆರೋಪದ ಮೇಲೆ ಜೈಲು ಸೇರಿರುವ ಬಾಬಾ ರಾಮ್ ರಹೀಂ, ಡೇರಾ ಸಚ್ಚಾ ಆಶ್ರಮದ ಮೇಲೆ ನಡೆದ ದಾಳಿಯಿಂದ ಸಾಕಷ್ಟು ಮಾಹಿತಿಗಳು ಹೊರ ಬರ್ತಿವೆ. ಭಕ್ತರ ಸೇವೆ ಹೆಸರಿನಲ್ಲಿ ರಾಮ್ ರಹೀಂ ಪ್ರತಿ ತಿಂಗಳು ಕೋಟಿಗಟ್ಟಲೆ ಹಣ ಗಳಿಸ್ತಿದ್ದ ಎಂಬ ಸತ್ಯ ಹೊರಬಿದ್ದಿದೆ.

ಬ್ಯಾಂಕ್ ಖಾತೆಯಿಲ್ಲದೆ, ಯಾವುದೇ ದಾಖಲೆಗಳಿಲ್ಲದೆ ಬಾಬಾ ಪ್ರತಿ ತಿಂಗಳು 922 ಕೋಟಿ ಹಣ ಗಳಿಸ್ತಿದ್ದ ಎಂದು ಮೂಲಗಳು ಹೇಳಿವೆ. ಈ ಹಣ ಹರಿಯಾಣ, ಪಂಜಾಬ್, ರಾಜಸ್ತಾನ ಡೇರಾದ 90 ಲಕ್ಷ ಶಾಶ್ವತ ಸದಸ್ಯರಿಂದ ಬರ್ತಿತ್ತು ಎನ್ನಲಾಗಿದೆ. ಇದ್ರಲ್ಲಿ 25 ಸಾವಿರ ಡೇರಾ ಅಧಿಕಾರಿಗಳಿದ್ದಾರೆ.

ಡೇರಾ ಶಾಶ್ವತ ಸದಸ್ಯತ್ವ ಪಡೆಯಲು ಬಯಸುವವರು ಹಾಗೂ ಅಧಿಕಾರಿಗಳು ತಮ್ಮ ಪ್ರತಿತಿಂಗಳ ಸಂಬಳದಲ್ಲಿ ಶೇಕಡಾ 10ರಷ್ಟು ಭಾಗವನ್ನು ಡೇರಾ ಆಶ್ರಮಕ್ಕೆ ನೀಡಬೇಕಾಗಿತ್ತು. ಪ್ರತಿ ತಿಂಗಳು ಒಂದು ಲಕ್ಷಕ್ಕಿಂತ ಹೆಚ್ಚು ಸಂಬಳ ಗಳಿಸುವವರನ್ನು ಅಧಿಕಾರಿಗಳನ್ನಾಗಿ ಹಾಗೂ 10 ಸಾವಿರಕ್ಕಿಂತ ಹೆಚ್ಚು ಸಂಬಳ ಗಳಿಸುವವರನ್ನು ಶಾಶ್ವತ ಸದಸ್ಯತ್ವಕ್ಕೆ ಆಯ್ಕೆ ಮಾಡಲಾಗುತ್ತಿತ್ತು.

ಡೇರಾದಲ್ಲಿ ಪ್ರತಿ ವರ್ಷ ಮೂರು ಬಹು ಮುಖ್ಯ ಕಾರ್ಯಕ್ರಮ ನಡೆಯುತ್ತಿತ್ತು. ಅದಕ್ಕಾಗಿ 3 ಮಿಲಿಯನ್ ಗೂ ಹೆಚ್ಚು ಜನ ಸೇರ್ತಾ ಇದ್ರು. ಗಳಿಕೆ ಕೂಡ ಕೋಟಿ ಕೋಟಿ ದಾಟುತ್ತಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...