alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲು ಸೇರ್ತಿದ್ದಂತೆ ಇಳಿಕೆಯಾಯ್ತು 6 ಕೆ.ಜಿ ತೂಕ

ಡೆರಾ ಸಚ್ಛಾ ಆಶ್ರಮದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಗುರ್ಮಿತ್ ರಾಮ್ ರಹೀಮ್ ಜೈಲು ಸೇರಿ 40 ದಿನ ಕಳೆದಿದೆ. ಜೈಲಿನಲ್ಲಿ ಕಾಲ ಕಳೆಯುತ್ತಿರುವ ಗುರ್ಮಿತ್ ತೂಕ ಬರೋಬ್ಬರಿ 6 ಕೆ.ಜಿ ಇಳಿದಿದೆ.

ಮಾಧ್ಯಮಗಳ ವರದಿ ಪ್ರಕಾರ, ಜೈಲು ಸೇರುವಾಗ 90 ಕೆ.ಜಿಯಿದ್ದ ಗುರ್ಮಿತ್ 40 ದಿನಗಳಲ್ಲಿ 6 ಕೆ.ಜಿ ಇಳಿದು 84 ಕೆ.ಜಿಯಾಗಿದ್ದಾನೆ. ಜೈಲಿನಲ್ಲಿ ನೀಡುವ ದಾಲ್ ಹಾಗೂ ರೊಟ್ಟಿ ಪ್ರಭಾವ ಎನ್ನಲಾಗ್ತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ರೂ ವೈದ್ಯರಿಂದ ಆಗದ ಕೆಲಸವನ್ನು ಜೈಲು ಮಾಡಿದೆ.

ಈ ಹಿಂದೆ ರಾಜರಂತಿದ್ದ ರಾಮ್ ರಹೀಮ್ ಈಗ ಸಾಮಾನ್ಯ ಕೈದಿಯಂತೆ ಕಾಲ ಕಳೆಯುತ್ತಿದ್ದಾನೆ. ಐಷಾರಾಮಿ ಹಾಸಿಗೆ ಬದಲು ನೆಲದ ಮೇಲೆ ಮಲಗ್ತಿದ್ದಾನೆ. ಅನುಯಾಯಿಗಳು ಕುಡಿಸುತ್ತಿದ್ದ ಪಾನೀಯದ ಬದಲು ಬರೀ ನೀರು ಕುಡಿಯುತ್ತಿದ್ದಾನೆ. ಇದೆಲ್ಲವೂ ಆತನ ತೂಕ ಇಳಿಕೆಗೆ ಕಾರಣವಾಗಿದೆ,

ಜೈಲು ಸೇರುವ ಮುನ್ನ ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ಅನೇಕ ಸಮಸ್ಯೆಗಳಿಂದ ರಾಮ್ ರಹೀಮ್ ಬಳಲುತ್ತಿದ್ದ. ವೈದ್ಯರಿಂದ ಔಷಧಿ ಪಡೆದಿದ್ದ ರಾಮ್ ರಹೀಮ್ ದಿನಕ್ಕೆ ಎರಡು ಬಾರಿ ಮಾತ್ರೆ ತೆಗೆದುಕೊಳ್ಳುತ್ತಿದ್ದ. ಆದ್ರೀಗ ತೂಕ ಇಳಿದಿದ್ದು ಆರೋಗ್ಯದಲ್ಲಿ ಸುಧಾರಣೆಯಾಗಿದೆ. ದಿನಕ್ಕೆ ಒಮ್ಮೆ ಮಾತ್ರ ಮಾತ್ರೆ ಸೇವನೆ ಮಾಡ್ತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...