alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದು ರಾಮ್ನಾಥ್ ಕೋವಿಂದ್ ನಾಮಪತ್ರ ಸಲ್ಲಿಕೆ

ramnath_ycp4nrt

ರಾಷ್ಟ್ರಪತಿ ಚುನಾವಣಾ ಕಣ ಈಗ ರಂಗೇರಿದೆ. ಎನ್ ಡಿಎ ಯಿಂದ ರಾಮ್ನಾಥ್ ಕೋವಿಂದ್ ಹಾಗೂ ಯುಪಿಎಯಿಂದ ಮೀರಾ ಕುಮಾರ್ ಚುನಾವಣಾ ಕಣಕ್ಕಿಳಿಯಲಿದ್ದಾರೆ. ಇಂದು ಎನ್ ಡಿ ಎ ಅಭ್ಯರ್ಥಿ ರಾಮ್ನಾಥ್ ಕೋವಿಂದ್ ನಾಮಪತ್ರ ಸಲ್ಲಿಸಲಿದ್ದಾರೆ.

ರಾಮ್ನಾಥ್ ನಾಮಪತ್ರ ಸಲ್ಲಿಕೆಗೆ ಬಿಜೆಪಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಾಮಪತ್ರದ ನಾಲ್ಕು ಸೆಟ್ ಸಿದ್ಧಪಡಿಸಲಾಗಿದೆ. ಶುಕ್ರವಾರ ಬೆಳಿಗ್ಗೆ 11 ಗಂಟೆ ಆಸುಪಾಸಿಗೆ ರಾಮ್ನಾಥ್ 10ನೇ ಅಕ್ಬರ್ ರಸ್ತೆಯಿಂದ ಹೊರಟು ಸಂಸತ್ ಭವನದ ಗ್ರಂಥಾಲಯ ತಲುಪಲಿದ್ದಾರೆ.

ರಾಮ್ನಾಥ್ ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಪಸ್ಥಿತರಿರಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಎನ್ ಡಿಎಯ ಪ್ರಮುಖ ನಾಯಕರು ಈ ವೇಳೆ ರಾಮ್ನಾಥ್ ಗೆ ಬೆಂಬಲ ನೀಡಲಿದ್ದಾರೆ. ಜೂನ್ 24ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಧಾನಿ ಸಮ್ಮುಖದಲ್ಲಿಯೇ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿಬೇಕೆನ್ನುವ ಉದ್ದೇಶದಿಂದ ರಾಮ್ನಾಥ್ ಕೋವಿಂದ್ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ರಾಷ್ಟ್ರಪತಿ ಹುದ್ದೆಗೆ ಜುಲೈ 17ರಂದು ಮತದಾನ ನಡೆಯಲಿದೆ. ಜುಲೈ 20ರಂದು ಮತ ಎಣಿಕೆ ನಡೆಯಲಿದೆ. ಜುಲೈ 24ರಂದು ಪ್ರಣಬ್ ಮುಖರ್ಜಿ ಅಧಿಕಾರವಧಿ ಮುಕ್ತಾಯವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...