alex Certify
ಕನ್ನಡ ದುನಿಯಾ       Mobile App
       

Kannada Duniya

‘ರಾಮಲೀಲಾ’ ವೇಳೆ ದುರ್ಘಟನೆ

hanuman-in-ramleela-1

ರಾಜಸ್ಥಾನದ ಬಿಕನೇರ್ ನಲ್ಲಿ ‘ರಾಮಲೀಲಾ’ ವೇಳೆ ದುರ್ಘಟನೆಯೊಂದು ನಡೆದಿದೆ. ಹನುಮಾನ್ ಪಾತ್ರಧಾರಿ 50 ಅಡಿ ಎತ್ತರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಸಂಜೀವಿನಿ ತರಲು 50 ಅಡಿ ಮೇಲೇರಿದ್ದ ಪಾತ್ರಧಾರಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ.

ಸಂತೋಷವಾಗಿದ್ದ ಸ್ಥಳ ದುಃಖದಲ್ಲಿ ಮುಳುಗಿ ಹೋಯ್ತು. ತಕ್ಷಣ ರಾಮಲೀಲಾವನ್ನು ನಿಲ್ಲಿಸಲಾಯ್ತು. ಜೊತೆಗೆ ಸ್ಥಳೀಯ ಆಡಳಿತ ತನಿಖೆಗೆ ಆದೇಶ ನೀಡಿದೆ. ಕಳೆದ 50 ವರ್ಷಗಳಿಂದ ಬಿಕನೇರ್ ನಲ್ಲಿ ರಾಮಲೀಲೆ ನಡೆಯುತ್ತಿದೆ.

62 ವರ್ಷದ ಧನ್ನಾರಾಮ್ 35 ವರ್ಷಗಳಿಂದ ಹನುಮಂತನ ಪಾತ್ರ ಧರಿಸುತ್ತಿದ್ದ ಎನ್ನಲಾಗಿದೆ. ಈ ಬಾರಿ ಸಂಘಟಕರು ‘ರಾಮಲೀಲೆ’ ಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದ್ದಾರೆ. 50 ಅಡಿ ಎತ್ತರದ ಎರಡು ಕಟ್ಟಡಗಳ ನಡುವೆ ಹಗ್ಗ ಕಟ್ಟಿ ಹನುಮಂತ, ಸಂಜೀವಿನ ತರಲು ಆಕಾಶದಲ್ಲಿ ಹಾರಿದಂತೆ ತೋರಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆದ್ರೆ ಸಂಘಟಕರ ಪ್ಲಾನ್ ಕೈಕೊಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...