alex Certify
ಕನ್ನಡ ದುನಿಯಾ       Mobile App
       

Kannada Duniya

ಅ.29 ರಿಂದ ಶುರುವಾಗಲಿದೆ ಅಯೋಧ್ಯೆ ಪ್ರಕರಣದ ಅಂತಿಮ ವಿಚಾರಣೆ

ಅಯೋಧ್ಯೆ ರಾಮಜನ್ಮಭೂಮಿ-ಬಾಬರಿ ಮಸೀದಿಗೆ ಸಂಬಂಧಿಸಿದಂತೆ 1994ರ ಇಸ್ಮಾಯಿಲ್ ಫಾರೂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಮೂರು ನ್ಯಾಯಮೂರ್ತಿಗಳ ಪೀಠ ತನ್ನ ನಿರ್ಧಾರ 2-1 (ಪರ-ವಿರೋಧಿ) ಪ್ರಕಾರ ತೀರ್ಪು ಪ್ರಕಟಿಸಿದೆ. ನಿರ್ಧಾರದ ಪ್ರಕಾರ ಪ್ರಕರಣವನ್ನು 7 ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ವರ್ಗಾಯಿಸುವುದಿಲ್ಲವೆಂದು ಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ತಮ್ಮ ಹಾಗೂ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ತೀರ್ಪನ್ನು ಓದಿದ್ರು. ನ್ಯಾಯಮೂರ್ತಿ ನಜೀರ್ ತಮ್ಮ ವಿರೋಧಿ ನಿರ್ಧಾರವನ್ನು ಓದಿದ್ರು. ಅಯೋಧ್ಯೆ ಪ್ರಕರಣದ ಅಂತಿಮ ವಿಚಾರಣೆ ಅಕ್ಟೋಬರ್ 29 ರಿಂದ ಶುರುವಾಗಬೇಕೆಂದು ಎಂದು ನ್ಯಾಯಮೂರ್ತಿಗಳ ಪೀಠ ಹೇಳಿದೆ.

ಪ್ರತಿಯೊಂದು ನಿರ್ಧಾರ ವಿಭಿನ್ನ ಸಂದರ್ಭದಲ್ಲಿ ಮಾಡಲಾಗುವುದು ಎಂದು ಅಶೋಕ್ ಭೂಷಣ್ ಹೇಳಿದ್ದಾರೆ. 1994 ರಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುವುದು ಅನಿವಾರ್ಯವಲ್ಲ ಎಂದು ಹೇಳಲಾಗಿತ್ತು. ಇದ್ರಲ್ಲಿ ಬೇರೆ ವ್ಯಾಖ್ಯಾನವೂ ಇದೆ. 1994 ರ ತೀರ್ಪು ಯಾವ ಸನ್ನಿವೇಶದಲ್ಲಿ ಬಂದಿದೆ ಎಂಬುದು ಮುಖ್ಯ ಎಂದಿದ್ದಾರೆ. ದೇವಸ್ಥಾನ, ಚರ್ಚ್, ಮಸೀದಿಯನ್ನು ಸರ್ಕಾರ ವಶಪಡಿಸಿಕೊಳ್ಳಬಹುದು ಎಂದು ಕೋರ್ಟ್ ಹೇಳಿದೆ.

1994 ರಲ್ಲಿ ಸುಪ್ರೀಂ ಕೋರ್ಟ್ ನಮಾಜ್ ಎಲ್ಲಿ ಬೇಕಾದ್ರೂ ಮಾಡಬಹುದು. ಮಸೀದಿಯೇ ಆಗಬೇಕಾಗಿಲ್ಲ. ಮಸೀದಿ ಇಸ್ಲಾಂ ಅವಿಭಾಜ್ಯ ಅಂಗವಲ್ಲ. ಹಾಗಾಗಿ ಸರ್ಕಾರ ಬಯಸಿದ್ರೆ ಅದನ್ನು ವಶಕ್ಕೆ ಪಡೆಯಬಹುದು ಎಂದು ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಮುಸ್ಲಿಂ ಸಂಘಟನೆ ಮೇಲ್ಮನವಿ ಸಲ್ಲಿಸಿತ್ತು. ಜೊತೆಗೆ ದೊಡ್ಡ ಸಂವಿಧಾನಿಕ ಪೀಠಕ್ಕೆ ಪ್ರಕರಣ ಹಸ್ತಾಂತರ ಮಾಡುವಂತೆ ಅರ್ಜಿ ಸಲ್ಲಿಸಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...